ADVERTISEMENT

ಛಲ ಮರೆತು ಬದುಕುವುದು ತಪ್ಪು: ಸಚಿವ ನಿರಾಣಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:05 IST
Last Updated 4 ಅಕ್ಟೋಬರ್ 2011, 8:05 IST
ಛಲ ಮರೆತು ಬದುಕುವುದು ತಪ್ಪು: ಸಚಿವ ನಿರಾಣಿ
ಛಲ ಮರೆತು ಬದುಕುವುದು ತಪ್ಪು: ಸಚಿವ ನಿರಾಣಿ   

ಬೀಳಗಿ: ಎಲ್ಲರೂ ಶ್ರೀಮಂತರಾಗಿ ಹುಟ್ಟುವುದು ಅಸಾಧ್ಯ. ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿದು ಸಿರಿವಂತನಾಗಬೇಕೆಂಬ ಛಲ ಹೊಂದದೇ ಇರು ವುದು ತಪ್ಪು ಎಂದು ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.

ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್.ಚಟುವಟಿಕೆಗಳ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್‌ಫೋಸಿಸ್ ಮುಖಾಂತರ ಲಕ್ಷಾಂತರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ನಾರಾ ಯಣಮೂರ್ತಿ ದಂಪತಿ, ಸೋಮಯ್ಯ ಸಕ್ಕರೆ ಕಾರ್ಖಾನೆಯ ಮಾಲೀಕ ಸೋಮಯ್ಯ, ಸಕ್ಕರೆ ಉದ್ದಿಮೆಯಲ್ಲಿ ವಿಶ್ವದ ಗಮನ ಸೆಳೆದ ವಿಜಯಾ ಮರಕುಂಬಿ ಮುಂತಾದವರು ತೀರ ಬಡತನದಿಂದ ಬಂದವರು.

ಆದರೆ ಅವರೆಲ್ಲರೂ ಪ್ರಗತಿ ಸಾಧಿಸಲು, ವಿಶ್ವವೇ ಅವರತ್ತ ಹೊರಳಿ ನೋಡುವಂತಾಗಲು ಅವರ ಛಲವೇ ಕಾರಣ ಎಂದು ಅವರು ಹೇಳಿದರು.ಕಷ್ಟಪಟ್ಟು ತಾವು ಕೂಡ ಮೇಲೆ ಬಂದಿದ್ದನ್ನು ಅವರು ವಿದ್ಯಾರ್ಥಿಗಳ ಮುಂದೆ ಬಿಡಿಸಿಟ್ಟರು.

ಭಾವಿ ಬದುಕನ್ನು ರೂಪಿಸುವುದು ಕೇವಲ ಪದವಿ ಶಿಕ್ಷಣವಲ್ಲ. ಗುಣಾತ್ಮಕ ಶಿಕ್ಷಣ ಹಾಗೂ ಛಲ ಮಾತ್ರದಿಂದ ಸಾಧ್ಯ ಎಂದು ಅವರು ಹೇಳಿದರು.`ಬಿಳಿಗಿರಿ ಸಿರಿ~ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದ ಸಾಹಿತಿ ಸಿದ್ದು ದಿವಾಣ, ಪುಸ್ತಕಗಳು ಓದುಗನಲ್ಲಿರುವ ಜಡತ್ವ ಕಳೆದು ಆತನಲ್ಲಿ ಜನ ಮುಖಿಯಾಗಿ, ಸಮಾಜಮುಖಿಯಾಗಿ ಚಿಂತಿಸು ವ ಗುಣಗಳನ್ನು ರೂಪಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಚ್.ತೆಕ್ಕೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಪ್ಪತ್ತು ವರ್ಷಗಳ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಪ್ರಾರಂಭಗೊಂಡ ಪ್ರಪ್ರಥಮ ಸರ ಕಾರಿ ಪದವಿ ಕಾಲೇಜು ಇದಾಗಿದೆ ಎಂದು ಹೇಳಿ ದರು. ಜೊತೆಗೆ ಕಾಲೇಜಿನ ಕುಂದುಕೊರತೆ ಹಾಗೂ ಅವಶ್ಯಕತೆಗಳನ್ನು ಸಚಿವರ ಗಮನಕ್ಕೆ ತಂದರು.

ಎಪಿಎಂಸಿ ಉಪಾಧ್ಯಕ್ಷ ಅನಿಲ ದೇಶಪಾಂಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಹಾಂತೇಶ ಅಂಗಡಿ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಸಿಂಗೆ ಉಪಸ್ಥಿತರಿದ್ದರು.

ರೂ.2 ಲಕ್ಷ ಠೇವಣಿ: ಸಚಿವ ಮುರುಗೇಶ ನಿರಾಣಿಯವರು ರೂ. 2 ಲಕ್ಷ ಕಾಲೇಜಿನ ಸ್ಥಿರನಿಧಿಯಲ್ಲಿಟ್ಟು ಬರುವ ಬಡ್ಡಿಯಿಂದ ಪ್ರತಿ ವಿಭಾಗದಿಂದ ಅಂತಿಮ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವದಾಗಿ ಹೇಳಿದರು.

ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಸಚಿವ ಮುರುಗೇಶ ನಿರಾಣಿ ಹಾಗೂ ಸದಸ್ಯರುಗಳನ್ನು ಸತ್ಕರಿಸಲಾಯಿತು.ಡಿ.ಎಂ.ಬಾಗವಾನ್ ಸ್ವಾಗತಿಸಿದರು. ಎಸ್.ಎಂ.ರಾಮಸಾಲಿ ವಂದಿಸಿದರು. ಪ್ರೊ. ಸಿ.ಎಂ. ನಾಯ್ಕ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.