ADVERTISEMENT

ಜನರ ಬದುಕಿನಲ್ಲಿ ಪರಿವರ್ತನೆ ತರಲು ಪ್ರವಾಸ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 7:30 IST
Last Updated 19 ಜನವರಿ 2012, 7:30 IST

ಮಹಾಲಿಂಗಪುರ: ದೇಶಕ್ಕೆ ಸ್ವಾತಂತ್ಯ ಬಂದ ಮೇಲೆ ಮತಬ್ಯಾಂಕ್ ಉದ್ದೇಶದಿಂದ ಜಾತಿ ಹೆಸರಿನಲ್ಲಿ ಸಾಮಾಜಿಕವಾಗಿ ಜನರ ಮನಸ್ಸುಗಳ ಮಧ್ಯೆ ಗೋಡೆ ನಿರ್ಮಿಸಲಾಗಿದೆ. ಆದರೆ ತಮ್ಮ ಆಡಳಿತಾವಧಿಯಲ್ಲಿ ಎಲ್ಲ ಸಮುದಾಯ ಜನಗಳನ್ನು ಸಮಾನ ಗೌರವದಿಂದ ನೋಡಿದ್ದೇವೆ. ನಮ್ಮ ಜನರಲ್ಲಿ ಜಾಗೃತಿ ಮೂಡಿಸಿ ಅವರ ಬದುಕಿನಲ್ಲಿ ಪರಿವರ್ತನೆ ತರುವ ಒಂದು ಪ್ರಯತ್ನವಾಗಿ ರಾಜ್ಯ ಪ್ರವಾಸ ಕೈಗೊಂಡಿರುವೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡೆಯೂರಪ್ಪ ಸ್ಪಷ್ಟಪಡಿಸಿದರು.

ಅವರು ಇಲ್ಲಿಗೆ ಸಮೀಪದ ಢವಳೇಶ್ವರದಲ್ಲಿ ನೆರೆ ಸಂತ್ರಸ್ತರಿಗೆ ಕೆ.ಆರ್.ಐ.ಡಿ.ಎಲ್. ಯೋಜನೆಯಡಿಯಲ್ಲಿ ಶಾಶ್ವತ ನೆಲೆ ಯೋಜನೆಯಡಿ 295 ಫಲಾನುಭವಿಗಳಿಗೆ  50್ಡ30 ನಿವೇಶನಗಳಲ್ಲಿ ತಲಾ ರೂ.1.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿ ತಾವು ಮಠ ಮಾನ್ಯರಿಂದ, ಕೈಗಾರಿಕೋದ್ಯಮಿಗಳಿಂದ ಭಿಕ್ಷೆ ಬೇಡಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಟ್ಟಿದ್ದು ಈ ಮನೆಗಳನ್ನು ಯಾರಿಗೂ ಬಾಡಿಗೆ ಕೊಡದೆ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿ, ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡಗಳನ್ನು ವಿತರಿಸಿದರು.

ವಸತಿ ಸಚಿವ  ವಿ.ಸೋಮಣ್ಣ,  ರಾಜ್ಯ ಬಿಜೆಪಿ ಸರ್ಕಾರ 7 ಲಕ್ಷ ಮನೆಗಳನ್ನು ನಿರ್ಮಿಸಿದೆ. ತೇರದಾಳ ಮತಕ್ಷೇತ್ರಕ್ಕೆ 8000 ಮನೆಗಳ ಮಂಜೂರಾತಿ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ,  ಶಾಸಕರು, ವಿಧಾನಸಭೆ ಸಚೇತಕರಾದ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು.

ಸಚಿವರಾದ ಮುರುಗೇಶ ನಿರಾಣಿ, ರೇಣುಕಾಚಾರ್ಯ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಚೇರಮನ್ ಮಹಾಂತೇಶ ಹಿಟ್ಟಿನಮಠ, ತಾ.ಪಂ. ಅಧ್ಯಕ್ಷೆ ಬಾಯಕ್ಕ ಕುಂಬಾರ, ಗಾ.ಪಂ. ಅಧ್ಯಕ್ಷ ಸದಾಶಿವ ಸಿಂಗಾಡಿ, ಉಪಾಧ್ಯಕ್ಷೆ ಮಹಾದೇವಿ ಇಟ್ನಾಳ, ತಾಪಂ ಸದಸ್ಯ ಸಿದ್ದವ್ವ ಸತ್ತಿಗೇರಿ, ಮಹಾಲಿಂಗಪ್ಪ ತಟ್ಟಿಮನಿ, ಪುರಸಭೆ ಅಧ್ಯಕ್ಷ ಜಿ.ಎಸ್. ಗೊಂಬಿ, ಉಪಾಧ್ಯಕ್ಷೆ ಕಸ್ತೂರಿ ಸಂಶಿ, ಪುರಸಭೆ ಸದಸ್ಯರಾದ ಬಸನಗೌಡ ಪಾಟೀಲ, ಪ್ರಕಾಶ ಅರಳೀಕಟ್ಟಿ, ಚನಬಸು ಹುರಕಡ್ಲಿ, ಮಹಾಲಿಂಗಪ್ಪ ಕಂಠಿ, ಮಹಾಲಿಂಗಪ್ಪ ಲಾತೂರ,ರವೀಂದ್ರ ಢಪಳಾಪುರ, ಶಿವಲಿಂಗ ಗಂಟಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ತಹಶೀಲ್ದಾರ ಶಂಕರಗೌಡ ಸೋಮನಾಳ, ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನಂದಗಾಂವ: ಘಟಪ್ರಭಾ ನದಿ ದಡದ ನಂದಗಾಂವ ಗ್ರಾಮದ ನೆರೆ ಸಂತ್ರಸ್ತ 120 ಜನ ಫಲಾನುಭವಿಗಳಿಗೆ ಆಸರೆ ಮನೆಗಳನ್ನು ಬಿ.ಎಸ್. ಯಡಿಯೂರಪ್ಪ ಹಸ್ತಾಂತರಿಸಿದರು. 

ವಿಧಾನ ಸಭೆ ಸಚೇತಕರಾದ ಸಿದ್ದು ಸವದಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ರಾಜ್ಯ ವಸತಿ ಸಚಿವ ವಿ.ಸೋಮಣ್ಣ, ಜಿ.ಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ಕೃಷ್ಣಪ್ಪ ಕನಕರಡ್ಡಿ, ಪುರಸಭೆ ಸದಸ್ಯರಾದ ಬಸನಗೌಡ ಪಾಟೀಲ, ಜಿಲ್ಲಾ ಬಿಜೆಪಿ ನೇಕಾರ ಮೋರ್ಚಾ ಅಧ್ಯಕ್ಷ ಮನೋಹರ ಶಿರೋಳ, ವಿಠ್ಠಲ ಸಂಶಿ, ವೆಂಕಪ್ಪ ಹೊಸೂರ, ಬಿ.ಜಿ. ಹೊಸೂರ, ಕುಲ್ಕರ್ಣಿ, ಕಲ್ಲನಗೌಡ ಪಾಟೀಲ, ಮಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.