ADVERTISEMENT

‘ಜೀವ ಉಳಿಸುವ ಮಹತ್ಕಾರ್ಯ ರಕ್ತದಾನ’

ಜಿಲ್ಲಾ ಪತಂಜಲಿ ಯೋಗ ಸಮಿತಿ ವತಿಯಿಂದ ರಕ್ತದಾನ ಶಿಬಿರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 7:04 IST
Last Updated 21 ಮಾರ್ಚ್ 2018, 7:04 IST

ಬಾಗಲಕೋಟೆ: ‘ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಅದರ ಕೃತಕ ನಿರ್ಮಾಣ ಅತ್ಯಂತ ಕಠಿಣ ಹಾಗೂ ದುಬಾರಿ. ಗರ್ಭಿಣಿ ಯರಿಗೆ, ಬಡರೋಗಿ ಗಳಿಗೆ, ಅಪಘಾತಕ್ಕಿ ಡಾದವರ ಜೀವ ಉಳಿಸುವಲ್ಲಿ ರಕ್ತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಇಲ್ಲಿನ ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಜಿ. ಪಾಟೀಲ ಅಭಿಪ್ರಾಯಪಟ್ಟರು.

ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ರಾಷ್ಟ್ರೀಯ ಮಹಿಳಾ ದಿನೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರೋಗ್ಯವಂತ ವ್ಯಕ್ತಿಗಳು ಸಕಾಲಕ್ಕೆ ರಕ್ತದಾನ ಮಾಡುವುದರಿಂದ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆಯಾಗುವುದಲ್ಲದೇ ರಕ್ತಹೀನತೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಸಂಬಂಧಿ ಸಿದ ರೋಗಗಳಾದ ತೆಲಸೇಮಿಯಾ, ಹಿಮೊಫಿಲಿಯಾ ರೋಗಗಳನ್ನು ತಡೆಗಟ್ಟಬಹುದು ಎಂದರು.

ADVERTISEMENT

ಜಿಲ್ಲಾ ಐ.ಸಿ.ಪಿ.ಸಿ ಮೇಲ್ವಿಚಾರಕ ಮಲ್ಲನಗೌಡ ಸುಬೇದಾರ ಮಾತನಾಡಿ, ‘ಇಂತಹ ಸಮಾಜಮುಖಿ ಸಂಘ, ಸಂಸ್ಥೆಗಳ ನೆರವಿನೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಮೂಲಕ ಬಡರೋಗಿಗಳಿಗೆ ನೆರವಾಗಲು ಸಹಾಯವಾಗುತ್ತದೆ’ ಎಂದರು.

ಪತಂಜಲಿ ಮಹಿಳಾ ಪ್ರಭಾರಿ ಸೀಮಾ ಮಣ್ಣೂರ ಮಾತನಾಡಿ, ಬಾಬಾ ರಾಮದೇವಜಿ ಅವರ ರಾಷ್ಟ್ರಭಕ್ತಿ ನಮಗೆಲ್ಲರಿಗೂ ಪ್ರೇರಣೆ ಎಂದರು.

ರಕ್ತದಾನಿಗಳಿಗೆ ರಾಜೇಂದ್ರ ಹೂಲಿ ಹಣ್ಣುಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬ್ಲಡ್ ಬ್ಯಾಂಕ್ ಅಧಿಕಾರಿಗಳಾದ ಡಾ.ಸಿ.ಕೆ.ಮೀನಾ, ಪತಂಜಲಿ ಪ್ರಭಾರಿಗಳಾದ ಎಚ್. ಎನ್. ಇನಾಮದಾರ, ರಾಜು ದಂಡಗಿ, ಶಶಿ ಕಂಬ್ಳಿ, ಶ್ರೀಶೈಲ ಮಠಪತಿ, ಸುಜಾತಾ ದೊಡ್ಡಮನಿ, ರೇಣುಕಾ ಹೆರಕಲ್ಲ, ಮಾಲತಿ, ಗೋಪಾಲಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.