ADVERTISEMENT

ತಂದೆ ತಾಯಂದಿರಲ್ಲಿ ದೇವರನ್ನು ಕಾಣಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 7:10 IST
Last Updated 21 ಮೇ 2012, 7:10 IST

ಗುಳೇದಗುಡ್ಡ: ವೀರಶೈವ ಧರ್ಮದಲ್ಲಿ ವರ್ಣಾಶ್ರಮಗಳಲ್ಲಿ ಮತ್ತು ಇಲ್ಲಿ ಮೇಲು-ಕೀಳುಗಳೆಂಬ ಭಾವನೆಗಳು ಇಲ್ಲ. ದೇವರ ಸ್ವರೂಪದಲ್ಲಿರುವ ತಂದೆ ತಾಯಿಗಳಲ್ಲಿ  ಪರಮಾತ್ಮನನ್ನು ಕಾಣಬೇಕು ಎಂದು ಕಾಶಿ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಸ್ಥಳೀಯ ಶೆಟ್ಟರ ಸಮಾಜದ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ನೂತನವಾಗಿ ನಿರ್ಮಿಸಿದ ವಸತಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಜನ್ಮ ಕೊಟ್ಟ ತಂದೆ-ತಾಯಿಗಳಲ್ಲಿ  ಪರಮಾತ್ಮವನ್ನು ಕಾಣಬೇಕು. ತಂದೆ- ತಾಯಂದಿರು ದೇವರ ಸ್ವರೂಪ ಇದ್ದಂತೆ ಅವರನ್ನು ಪ್ರೀತಿಯಿಂದ ಕಾಣಬೇಕು. ಇಂದಿನ ದಿನಮಾನಗಳಲ್ಲಿ ಯುವಕರು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೇ ಸಧೃಡ ವ್ಯಕ್ತಿಗಳಾಗಿ ಉತ್ತಮ ಜೀವನ ಸಾಗಿಸಬೇಕು ಎಂದರು.

ಮುಖ್ಯಅತಿಥಿಗಳಾಗಿ ಇಲಕಲ್ಲದ ನಿವೃತ್ತ ಪ್ರಾಚಾರ್ಯ ಡಾ, ಶಂಭು ಬಳಿಗಾರ ಮಾತನಾಡಿ ಮಾನವ ಪ್ರಕೃತಿ ಹಾಗೂ ಸಮಾಜದ ಋಣ ತೀರಿಸಬೇಕು. ಜೀವನದಲ್ಲಿ ಆಸ್ತಿ ಅಂತಸ್ತುಗಳಿಗಿಂತ ಆರೋಗ್ಯದ ಭಾಗ್ಯ ಎನ್ನುವುದು ತುಂಬಾ ದೊಡ್ಡದು ಎಂದರು. ಕಮತಗಿ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ ಹಾಗೂ ಮುರು ಘಾಮಠದ ಕಾಶಿನಾಥ ಸ್ವಾಮೀಜಿ ಮಾತನಾಡಿ ಸಮಾಜ ದಲ್ಲಿರುವ ಬಡವರ, ನಿರ್ಗತಿಕರ ಬಗ್ಗೆ ಕಾಳಜಿ ವಹಿಸುವ ಜೊತೆಗೆ ದಾನವಾಗಿ ಮಾಡಬೇಕು  ಅದರಿಂದ ವ್ಯಕ್ತಿಯ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
 
ವಸತಿ ನಿಲಯದ ದಾನಿಗ ಳಾದ ಸಂಗಪ್ಪ ಜಿ. ನಾಯನೇಗಲಿ ದಂಪತಿ ಗಳವರನ್ನು  ಶೆಟ್ಟರ ಸಮಜದ ವತಿ ಯಿಂದ ಸನ್ಮಾನಿಸಲಾಯಿತು. ಅಮೃತ ಬಿಂದು ಪುಸ್ತಕ ಬಿಡುಗಡೆ ಗೊಳಿಸಿದರು. ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೆಟ್ಟರ ಸಮಾಜದ ಅಧ್ಯಕ್ಷ ಅಂದಾನೆಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.

ಬಸಯ್ಯ ಸ್ವಾಮೀಜಿ, ಮನೋ ಹರ ಶೆಟ್ಟರ, ರವಿ ಪಟ್ಟಣಶೆಟ್ಟಿ, ಅಶೊಕ ನಾಯನೇಗಲಿ, ಬಸಪ್ಪ ಚಿಕ್ಕನರ ಗುಂದ, ಬಸವರಾಜ ಹಡಗಲಿ, ಬಿ.ಎ. ತೇಲ ಸಂಗ, ಮಲ್ಲಿಕಾರ್ಜುನ ಶೀಲವಂತ, ಎಸ್.ಎಚ್.ಹುಳಿಪಲ್ಲೇದ, ಈರಣ್ಣ ಪಟ್ಟಣ ಶೆಟ್ಟಿ, ರಾಚಣ್ಣ ಕೆರೂರ, ಘನ ಶ್ಯಾಮದಾಸ ರಾಠಿ  ಉಪಸ್ಥಿತರಿದ್ದರು. ಪ್ರಕಾಶ ನರಗುಂದ ಸ್ವಾಗತಿಸಿದರು. ಸಂಗಣ್ಣ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.