ADVERTISEMENT

ನೀರು ಪೂರೈಕೆಗಾಗಿ ಒತ್ತಾಯ

ಫ್ಲೋರೈಡ್‌ಯುಕ್ತ ನೀರು: ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:29 IST
Last Updated 19 ಮೇ 2018, 9:29 IST
ಬಾದಾಮಿಯಲ್ಲಿ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಿಳೆಯರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು
ಬಾದಾಮಿಯಲ್ಲಿ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಿಳೆಯರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು   

ಬಾದಾಮಿ: ಇಲ್ಲಿನ ಕಲಾಲ ಮತ್ತು ಹೊರಪೇಟೆ ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಗುರುವಾರ ಪುರಸಭೆ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.

‘ಕುಡಿಯುವ ನೀರು ಬರುತ್ತಿಲ್ಲ. ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಆರೋಗ್ಯ ಹಾಳಾಗಿದೆ. ಅನೇಕ ಬಾರಿ ಪುರಸಭೆ ಗಮನಕ್ಕೆ ತರಲಾಗಿದೆ. ಯಾರೂ ಗಮನಹರಿಸಿಲ್ಲ’ ಎಂದು ಆರೋಪಿಸಿದರು. ಕುಡಿಯುವ ನೀರಿಗೆ ಬೇರೆ ವಾರ್ಡ್‌ಗಳಿಗೆ ಹೋಗಿ ತರುತ್ತೇವೆ. ಶುದ್ಧ ಕುಡಿಯುವ ನೀರನ್ನು ಪುರಸಭೆ ಪೂರೈಸಬೇಕು ಎಂದು ಹೇಳಿದರು.

ಪೈಪ್‌ ದುರಸ್ತಿ ಕೈಗೊಂಡು ಕುಡಿಯುವ ನೀರಿನ ಸೌಲಭ್ಯ ಮಾಡುವುದಾಗಿ ಪುರಸಭೆ ನೌಕರ ಎಫ್‌.ಎನ್‌.ಹುಲ್ಲಿಕೇರಿ ಭರವಸೆ ನೀಡಿದರು. ಸರೋಜಾ ಕಲಾಲ, ಶೈಲಾ ಸಿಂದಗಿ, ಮಹಾದೇವಿ ಹಿರೇಮಠ, ರೇಣುಕಾ ಕಲಾಲ, ವಿಜಯಲಕ್ಷ್ಮಿ ವಡ್ಡರ, ಶೋಭಾ ಕಮ್ಮಾರ, ಶಶಿಕಲಾ ಲೆಂಕೆನ್ನವರ, ಕುಸುಮಾ ಕಾಂಬಳೆ, ರುಕ್ಮವ್ವ ಮಾದರ, ನಾಗವ್ವ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.