ADVERTISEMENT

ಪ್ರವಾಸೋದ್ಯಮ ದಿನಾಚರಣೆ; ಜಾಥಾ ನಾಳೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 11:28 IST
Last Updated 26 ಸೆಪ್ಟೆಂಬರ್ 2013, 11:28 IST

ಬಾಗಲಕೋಟೆ: ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಇದೇ 27 ರಂದು ಐತಿಹಾಸಿಕ ಬಾದಾಮಿಯಲ್ಲಿ ಆಚರಿಸಲು ಜಿಲ್ಲಾಡಳಿತವು ನಿರ್ಧರಿಸಿದೆ.

   ವಿವಿಧ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ  ಬೆಳಗ್ಗೆ 8.30 ಗಂಟೆಗೆ ವೀರಪುಲಕೇಶಿ ಶಿಕ್ಷಣ ಸಂಸ್ಥೆ ಹಾಗೂ ಕಾಳಿದಾಸ ಶಿಕ್ಷಣ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಬಾದಾಮಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿ ಅಲ್ಲಿಂದ ವಿವಿಧ ಘೋಷಣೆಗಳನ್ನು ಕೂಗುತ್ತಾ ಮಾರ್ಕೆಟ್ ಮೂಲಕ ಜಾಥಾ ಹೊರಟು ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೇರಲಿದೆ.

  ಪ್ರವಾಸೋದ್ಯಮದ ಈ ಬಾರಿಯ ಸಂದೇಶ  ‘ಪ್ರವಾಸೋದ್ಯಮ ಹಾಗೂ ಜಲ; ನಮ್ಮ ಸಾಮಾನ್ಯ ಭವಿಷ್ಯವನ್ನು ರಕ್ಷಣೆ ಮಾಡುತ್ತದೆ’ ಎಂಬುದಾಗಿದ್ದು ಯುವ ಪೀಳಿಗೆಯಲ್ಲಿ ಜಾಗೃತಿ ಅರಿವು ಮೂಡಿಸುವ ದೃಷ್ಟಿಯಿಂದ ಈ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ.

   ಯುವ ವಿದ್ಯಾರ್ಥಿಗಳಿಂದ ಅಗಸ್ತ್ಯತೀರ್ಥದ ಹಾಗೂ ವಸ್ತು ಸಂಗ್ರಹಾಲಯದ ಸುತ್ತಲು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ವಸ್ತು ಸಂಗ್ರಹಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

  ಬೆಳಗ್ಗೆ 8.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಪುರಸಭೆ ಅಧ್ಯಕ್ಷೆ ಗೌರಮ್ಮ ಬೇವೂರ, ಜಿಲ್ಲಾಧಿಕಾರಿ ಮನೋಜ್ ಜೈನ್, ಬಾದಾಮಿ ಜೆ.ಎಂ.ಎಫ್.ಸಿ.ಎಂ. ಹಿರಿಯ ದಿವಾಣಿ ನ್ಯಾಯಾಧೀಶ ಬಿ.ನಾರಾಯಣಪ್ಪ, ಜಿ. ಪಂ. ಸಿಇಒ ಎಸ್.ಜಿ.ಪಾಟೀಲ, ವೀರಪುಲಕೇಶಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ಸಿ.ಪಟ್ಟಣದ, ಸಮಾಜ ಸೇವಕ ಇಷ್ಟಲಿಂಗ ಶಿರಸಿ, ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ ಡಾ. ಉದಯ ಶಾಸ್ತ್ರಿ, ಪುರಾತತ್ವ ಅಧಿಕಾರಿ ಸೋಮಲಾ ನಾಯಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಂಕರಗೌಡ ಸೋಮನಾಳ, ತಹಶೀಲ್ದಾರ್‌ ಅಜೀಜ್ ದೇಸಾಯ, ನಿರ್ಮಿತ ಕೇಂದ್ರ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ, ವಾರ್ತಾಧಿಕಾರಿ ಮಂಜುನಾಥ ಸೂಳ್ಳೊಳ್ಳಿ, ಪುರಸಭೆ ಅಧಿಕಾರಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು.  10- ಗಂಟೆಗೆ ವಸ್ತು ಸಂಗ್ರಹಾಲಯದ ಅವರಣ­ದಲ್ಲಿ ಖ್ಯಾತ ಇತಿಹಾಸ ತಜ್ಞ ಡಾ. ಶಿಲಾಕಾಂತ ಪತ್ತಾರ, ಪ್ರವಾಸೋದ್ಯಮ ಹಾಗೂ ಜಲ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.