ADVERTISEMENT

‘ಬಲಪಂಥೀಯರ ಮೇಲೆ ವೃಥಾ ಆರೋಪ ಸಲ್ಲ’

ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 4:59 IST
Last Updated 5 ಅಕ್ಟೋಬರ್ 2017, 4:59 IST

ಬಾಗಲಕೋಟೆ: ಸಾಹಿತಿ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಬಲಪಂಥೀಯರ ಕೈವಾಡವಿದೆ ಎಂಬ ಆರೋಪವನ್ನು ತಾವು ಒಪ್ಪುವುದಿಲ್ಲ ಎಂದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಅದಕ್ಕೆ ಸಾಕ್ಷಿ ಏನಿದೆ ಎಂದು ಬುಧವಾರ ಇಲ್ಲಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಆರೋಪಕ್ಕೆ ಕನಿಷ್ಠ ಸಾಕ್ಷಿಯಾದರೂ ಇರಬೇಕು. ಸುಮ್ಮನೆ ಆರೋಪ ಮಾಡಿದರೆ ಯಾರೂ ಒಪ್ಪುವುದಿಲ್ಲ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಧರ್ಮಕ್ಕಾಗಿ, ಅದರ ರಕ್ಷಣೆಗಾಗಿ ಹೋರಾಡುವವರಿಗೆ ರಕ್ಷಣೆ ಇಲ್ಲ. ಅಂಥವರಿಗೆ ಆಪತ್ತು ಖಚಿತ. ಧರ್ಮ ರಕ್ಷಣೆಗೆ ನಿಂತವರ ಹತ್ಯೆಯೂ ಆಗಬಹುದು. ಏನಾದರೂ ಆಗಬಹುದು. ಗೋವುಗಳ ರಕ್ಷಣೆಗೆ ನಿಂತವರ ಮೇಲೆ ಆಕ್ರಮಣ ನಡೆಯುತ್ತಿದೆ. ಆಕ್ರಮಣಕಾರರಿಗೆ ಸರ್ಕಾರಿ ಯಂತ್ರವೇ ಪೋಷಕನಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.