ADVERTISEMENT

ಬಾದಾಮಿ ತಾಲ್ಲೂಕು ಪಂಚಾಯಿತಿ: ಬಿಜೆಪಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:20 IST
Last Updated 16 ಫೆಬ್ರುವರಿ 2011, 10:20 IST

ಬಾದಾಮಿ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಹಂಸನೂರ ಮತಕ್ಷೇತ್ರದ ಸುಶೀಲಾಬಾಯಿ ರಾಮಪ್ಪ ಹೆಬ್ಬಳ್ಳಿ ಹಾಗೂ ಉಪಾಧ್ಯಕ್ಷರಾಗಿ ಜಾಲಿಹಾಳ ಮತಕ್ಷೇತ್ರದ ತಾಯಪ್ಪ ಬಸಪ್ಪ ಮಾದರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ತಾಲ್ಲೂಕು ಪಂಚಾಯಿತಿಯು ಒಟ್ಟು 22 ಸದಸ್ಯ ಬಲ ಹೊಂದಿದ್ದು, ಬಿಜೆಪಿಯು 16 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದರಿಂದ ಆಡಳಿತ ಚುಕ್ಕಾಣಿಯು ಆ ಪಕ್ಷಕ್ಕೆ ಲಭಿಸಿತು.

ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆ ನಡೆಸಿದ ಉಪ ವಿಭಾಗಾಧಿಕಾರಿ ಗೋವಿಂದರೆಡ್ಡಿ ಅವರು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.ಬಿಜೆಪಿಯ ಒಬ್ಬ ಸದಸ್ಯರು ಚುನಾವಣೆ ವೇಳೆ ಗೈರು ಉಳಿದಿದ್ದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ತಾಪಂ ಸದಸ್ಯರು ಅಭಿನಂದಿಸಿದರು.

ತಹಸೀಲ್ದಾರ ಮಹೇಶ ಕರ್ಜಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಎನ್.ಮಠ ಉಪಸ್ಥಿತರಿದ್ದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಣೆಯಾದ ಬಳಿಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.