ADVERTISEMENT

ಮಕ್ಕಳ ಸುಪ್ತ ಪ್ರತಿಭೆಗೆ ಅವಕಾಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 9:00 IST
Last Updated 5 ಮಾರ್ಚ್ 2012, 9:00 IST

ಬಾದಾಮಿ: ಪಠ್ಯ ಶಿಕ್ಷಣವು ಮಕ್ಕಳ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸಲಿದ್ದು, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸೃಜನಾತ್ಮಕ ಕೌಶಲ್ಯವನ್ನು ವಿಕಸಿತಗೊಳಿ ಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ಹೇಳಿದರು. 
ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾ ರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರು ಸನ್ಮಾನಿಸಿ ಮಾತನಾಡಿದರು.

ಡಾ.ಯು.ಕೆ.ನಂದನೂರ ಅಧ್ಯಕ್ಷತೆ ವಹಿಸಿದ್ದರು.ಎ.ಎಚ್.ಬಬರ್ಚಿ,ಎಸ್. ಎಸ್. ತಬ್ರೇಜ್,ಎಸ್.ಐ.ಹವಾಲ್ದಾರ, ವಿ.ಎಸ್.ಮೇಟಿ ಅತಿಥಿಗಳಾಗಿ ಆಗಮಿ ಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ದವು. ಪಾಲ ಕರು, ಶಿಕ್ಷಕ ಸಿಬ್ಬಂದಿ ಹಾಜರಿದ್ದರು. ಮುಖ್ಯ ಶಿಕ್ಷಕ ಎಂ.ಐ.ಬಾಗವಾನ ಸ್ವಾಗತಿಸಿದರು.ಶಿಕ್ಷಕಿ ಎಸ್.ಎ.ಸವಣೂರ ವಂದಿಸಿದರು.

ಶಾಲೆಗೆ ಭೂಮಿ ದಾನ
ಬಾದಾಮಿ: ನಂದಿಕೇಶ್ವರದಲ್ಲಿ ಉನ್ನತೀ ಕರಿಸಿದ  ಸರ್ಕಾರಿ ಪ್ರೌಢ ಶಾಲೆಗೆ ಗ್ರಾಮದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಬಿ.ಹಂಗರಗಿ ರೂ.20ಲಕ್ಷ ಮೌಲ್ಯದ ಎರಡು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ ಎಂದುಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಳಿಸಿದ್ದಾರೆ.

ಈಚೆಗೆ ಗ್ರಾಮದ ಕುಮಾರೇಶ್ವರ ಅನುಭವ ಮಂಟಪದಲ್ಲಿ ಜರುಗಿದ ಸಭೆಯಲ್ಲಿ ಹಂಗರಗಿ ಅವರು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಭೂಮಿ ದಾನ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತಿ ಸದಸ್ಯ ಡಾ.ಎಂ. ಜಿ.ಕಿತ್ತಲಿ,ವೀರನಗೌಡ ಜನಾಲಿ, ಜಿ.ಡಿ.ಮಣ್ಣೂರಗ್ರಾಮದ ಹಿರಿಯರು ಮತ್ತು ಸ್ವಾಮಿ ವಿವೇಕಾನಂದ ಯುವಕ ಸಂಘದ ಸದಸ್ಯರು ಹಾಜರಿದ್ದರು.ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ ಹುಗ್ಗಿ ಮತ್ತು ಗ್ರಾಮದ ಹಿರಿಯರು ದಾನಿ ಯನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.