ADVERTISEMENT

ರೋಮಾಂಚನಗೊಳಿಸಿದ ಬಾಲಕಿಯರ ಖೋಖೋ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 6:40 IST
Last Updated 5 ಆಗಸ್ಟ್ 2013, 6:40 IST

ಅಮೀನಗಡ: ವಲಯ ಮಟ್ಟದ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವು ಕಮತಗಿಯ ಹುಚ್ಚೇಶ್ವರ  ಸಂಯುಕ್ತ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಜರುಗಿತು.

ಶನಿವಾರ ನಡೆದ ಕ್ರೀಡಾಕೂಟದ ಬಾಲಕಿಯರ ಖೋಖೋ ಟೂರ್ನಿಯಲ್ಲಿ ಕಮತಗಿಯ ಹುಚ್ಚೇಶ್ವರ ಪ್ರೌಢಶಾಲೆ ತಂಡವು ಸೂಳೇಭಾವಿಯ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿತು.

ಬಾಲಕಿಯರ ವಿಭಾಗ: 100 ಮೀಟರ್ ಓಟ: ಗಂಗೂರಿನ ನಾಗರತ್ನಾ ಸರಗಣಾಚಾರಿ (ಪ್ರಥಮ), ಅಮೀನಗಡದ ಎಸ್.ವೈ. ಬಂಡಿ (ದ್ವಿತೀಯ), 200ಮೀಟರ್ ಓಟ: ಸೂಳೇಭಾವಿಯ ಎಸ್.ಐ. ಕಲಬುರ್ಗಿ(ಪ್ರಥಮ), ಆರ್.ಎಸ್. ಚವ್ಹಾಣ(ದ್ವಿತೀಯ), 400 ಮೀಟರ್ ಓಟ: ಕಮತಗಿ ಲಕ್ಷ್ಮೀಬಾಯಿ ಕುಂಬಾರ(ಪ್ರಥಮ), ಗಂಗೂರಿನ ಈರಮ್ಮ ಕುಂಟೋಜಿಮಠ(ದ್ವಿತೀಯ).

800 ಮೀಟರ್ ಓಟ: ಕಮತಗಿ ಭಾಗೀರಥಿ ಸಿರಗುಂಪಿ(ಪ್ರಥಮ), ಎಸ್.ಪಿ. ರಾಠೋಡ, (ದ್ವಿತೀಯ). 1500 ಮೀಟರ್ ಓಟ: ಸೂಳೇಭಾವಿಯ ಶ್ರೀದೇವಿ ಆಲೂರ(ಪ್ರಥಮ), ಆರ್.ಎಸ್. ಚವಾಣ(ದ್ವಿತೀಯ),  3ಸಾವಿರ ಮೀಟರ್ ಓಟ: ಕಮತಗಿಯ ಪಲ್ಲವಿ ತಂಬೂರಿ(ಪ್ರಥಮ), ರೇಣುಕಾ ಬೀಳಗಿ (ದ್ವಿತೀಯ).

ಗುಂಡು ಎಸೆತ: ಅಮೀನಗಡದ ಜೆ.ಐ. ಮಾದರ(ಪ್ರಥಮ), ಸೂಳೇಭಾವಿ ಎ.ಎಂ. ವಾಲಿಕಾರ (ದ್ವಿತೀಯ). ಉದ್ದ ಜಿಗಿತ: ಅಮೀನಗಡದ ಆರ್.ಎಲ್. ಲಮಾಣಿ (ಪ್ರಥಮ), ಗಂಗೂರಿನ ನಾಗರತ್ನಾ ಸರಗಣಾಚಾರಿ (ದ್ವಿತೀಯ).

ಬಾಲಕರ ವಿಭಾಗ: 100ಮೀಟರ್ ಓಟ: ಕಮತಗಿಯ ಪರಶುರಾಮ್ ವಡ್ಡರ (ಪ್ರಥಮ), ಅಮೀನಗಡದ ಟಿ.ಬಿ. ವಡ್ಡರ (ದ್ವಿತೀಯ).  200ಮೀಟರ್ ಓಟ: ಕಮತಗಿಯ ಪ್ರಭಾಕರ್ ಕುರಿ (ಪ್ರಥಮ), ಸೂಳೇಭಾವಿಯ ಎಸ್.ಎಂ. ವಾಲಿಕಾರ. 400 ಮೀಟರ್ ಓಟ: ಕಮತಗಿ ಪರಶುರಾಮ್ ವಡ್ಡರ (ಪ್ರಥಮ), ಗಂಗೂರಿನ ಕಾಲೇಸಾಬ (ದ್ವಿತೀಯ).

800 ಮೀಟರ್ ಓಟ: ಕಮತಗಿ ಪರಶುರಾಮ ವಡ್ಡರ (ಪ್ರಥಮ), ಸೂಳೇಭಾವಿಯ ಸುರೇಶ ಜಾಧವ್  (ದ್ವಿತೀಯ).1500 ಮೀಟರ್ ಓಟ: ಕಮತಗಿ ರಮೇಶ ಗುಳಬಾಳ (ಪ್ರಥಮ), ಹಿರೇಮಾಗಿಯ ಅಶೋಕ ಸಿಕ್ಕೇರಿ(ದ್ವಿತೀಯ).

ಗುಂಡು ಎಸೆತ: ಸೂಳೇಭಾವಿಯ ನಿಸಾರ್ ಮಾಗಿ (ಪ್ರಥಮ), ಹಿರೇಮಾಗಿಯ ಆನಂದ ಕೆಂಪಾರ (ದ್ವಿತೀಯ). ಚಕ್ರ ಎಸೆತ: ಕಮತಗಿ ಮಂಜುನಾಥ ಯಲಿಗಾರ (ಪ್ರಥಮ), ಗಂಗೂರಿನ ಕಾಲೇಸಾಬ ವಾಲಿಕಾರ (ದ್ವಿತೀಯ). ಉದ್ದು ಜಿಗಿತ: ಸೂಳೇಭಾವಿಯ ಡಿ.ಎಸ್. ನದಾಫ (ಪ್ರಥಮ), ಎಸ್.ಎ.ಧುತ್ತರಗಿ (ದ್ವಿತೀಯ). ಭಲ್ಲೆ ಎಸೆತ: ಕಮತಗಿಯ ಪ್ರವೀಣ ವಡ್ಡರ (ಪ್ರಥಮ), ಹಿರೇಮಾಗಿಯ ಸುರೇಶ ಬಾರಕೇರ (ದ್ವಿತೀಯ). ವಾಲಿಬಾಲ್: ಕಮತಗಿ ಹುಚ್ಚೇಶ್ವರ ಪ್ರೌಢಶಾಲೆ (ಪ್ರಥಮ), ಅಮೀನಗಡದ ಸಂಗಮೇಶ್ವರ ಪ.ಪೂ ಕಾಲೇಜಿನ ಪ್ರೌಢಶಾಲೆ (ದ್ವಿತೀಯ). ಖೋಖೋ ಸ್ಪರ್ಧೆ: ಸೂಳೇಭಾವಿಯ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆ (ಪ್ರಥಮ),ಕಮತಗಿಯ ಹುಚ್ಚೇಶ್ವರ ಪ್ರೌಢಶಾಲೆ (ದ್ವಿತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.