ADVERTISEMENT

ವೃದ್ಧೆ ಕೊಲೆ ಸುತ್ತ ಅನುಮಾನದ ಹುತ್ತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 8:20 IST
Last Updated 10 ಏಪ್ರಿಲ್ 2012, 8:20 IST

ಬಾದಾಮಿ: ಕಳೆದ ಏ.4ರಂದು ಬುಧ ವಾರ ರಾತ್ರಿ ಮನೆಯಲ್ಲಿ ಮಲಗಿದ ವೃದ್ಧೆ ಯಂಕುಬಾಯಿ ಜೋಶಿ ಮರು ದಿನ  ಬೆಳಿಗ್ಗೆ ನಗರದ ಹೊರವಲಯದ ಹಳ್ಳದ ಪಕ್ಕದ ಮುಳ್ಳಿನಲ್ಲಿ ಶವವಾಗಿ ಬಿದ್ದಿದ್ದ ಪ್ರಕರಣ ಜನತೆಯಲ್ಲಿ ಸಂದೇ ಹಕ್ಕೆ ಕಾರಣವಾಗಿದೆ. 

ಯಂಕುಬಾಯಿಯ ಶವದ ಕುತ್ತಿಗೆ ಯಲ್ಲಿ ಕಪ್ಪು ಕಲೆಯಾಗಿದ್ದು, ದುಷ್ಕರ್ಮಿ ಗಳು ಕಿವಿಯಲ್ಲಿನ ಓಲೆಯನ್ನು ಹರಿ ದಿದ್ದಾರೆ. ಮೈಮೇಲಿನ ಬಟ್ಟೆಯೆಲ್ಲ ಚೆಲ್ಲಾಪಿಲ್ಲಿಯಾಗಿದೆ. ತಾಲ್ಲೂಕು ವೈದ್ಯಾ ಧಿಕಾರಿ ಡಾ.ಕವಿತಾ ಶಿವನಾಯ್ಕರ ಶವದ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.

ಯಂಕುಬಾಯಿಯ ಪತಿಯ ಮನೆ ಸಿಂದಗಿ ತಾಲ್ಲೂಕಿನ ಗಂಗನಳ್ಳಿ ಗ್ರಾಮ. ಪತಿಯ ಮರಣದ ನಂತರ ಇಬ್ಬರು ಗಂಡು ಮಕ್ಕಳೊಂದಿಗೆ ತವರು ಮನೆ ಬಾದಾಮಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಒಬ್ಬ ಮಗ ಚಂದ್ರ ಹಾಸ ಜೋಶಿ ಜಮಖಂಡಿಯಲ್ಲಿ ನೌಕರಿ ಯಲ್ಲಿದ್ದಾರೆ. ಇನ್ನೊಬ್ಬ ಮಗ ಭೀಮ ಸೇನ ಅಂದು ಮನೆಯಲ್ಲಿರಲಿಲ್ಲ.

ಬೇಸಿಗೆಯ ಬಿಸಿಲ ಝಳದಿಂದ ರಾತ್ರಿ ಮನೆಯ ಬಾಗಿಲನ್ನು ಹಾಕದೇ ಹಾಗೆಯೇ ಮಲಗಿದ್ದರು ಎನ್ನಲಾಗಿದೆ. ರಾತ್ರಿ ಸಮಯು ಆಟೋ ಓಡಾಡಿದ ಸಪ್ಪಳವಾಯಿತು ಎಂದು ಓಣಿಯ ಮಂದಿ ಹೇಳುತ್ತಾರೆ. ನಿದ್ದೆಯಲ್ಲಿರುವ ಮಹಿಳೆಯನ್ನು ಆಟೊದಲ್ಲಿ ದುಷ್ಕರ್ಮಿ ಗಳು ಕರೆದುಕೊಂಡು ಹೋಗಿರಬ ಹುದು ಎಂದು ಶಂಕೆ ವ್ಯಕ್ತಪಡಿಸು ತ್ತಾರೆ. ಮಹಿಳೆಯ ಶವ ದೊರಕಿದ ಸ್ಥಳದ ಸಮೀಪದ ಮನೆಯವರು ಸಹ ರಾತ್ರಿ ಸಮಯದಲ್ಲಿ ಒಂದು ಆಟೋ ಸಪ್ಪಳ ಕೇಳಿ ಬಂದಿದೆ ಎನ್ನುತ್ತಾರೆ.

ಸಾವಿಗೀಡಾದ ಮಹಿಳೆಯ ಕೊರಳಲ್ಲಿ ಒಂದು ಚಿನ್ನದ ಸರವಿತ್ತು. ಮತ್ತು ಕಿವಿಯಲ್ಲಿ ಓಲೆಗಳು ಇದ್ದವು ಎನ್ನಲಾ ಗಿದೆ. ಹಿರಿಯ ಮಗ ಭೀಮಸೇನನು ಎರಡು ವರ್ಷಗಳ ಹಿಂದೆ ನಮ್ಮ ಮನೆಯು ಕಳ್ಳತನವಾಗಿತ್ತು. ಈಗ ನನ್ನ ತಾಯಿಯನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ.

ಪೊಲೀಸರು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಬೇರೆಯವರ ಮನೆಯಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆಯನ್ನು ಹೊರೆ ಯುವ ಮಹಿಳೆಯು ಒಳ್ಳೆಯ ಸ್ವಭಾವ ದವರು. ಈ ಮಹಿಳೆ ಎಂದೂ ಮನೆ ಯನ್ನು ಬಿಟ್ಟು ಹೋಗದವಳು. ಊರ ಹೊರಗೆ ಹೋಗಿ ಹೇಗೆ ಶವವಾದಳು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡ ತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.