ADVERTISEMENT

ಸೋರೆಕಾಯಿಗೆ ಮನಸೋತ ರೈತರು

ಶಿ.ಗು.ಹಿರೇಮಠ
Published 24 ಡಿಸೆಂಬರ್ 2017, 7:09 IST
Last Updated 24 ಡಿಸೆಂಬರ್ 2017, 7:09 IST
ಚಪ್ಪರದ ನೆರಳಡಿ ಸೋರೆಕಾಯಿ
ಚಪ್ಪರದ ನೆರಳಡಿ ಸೋರೆಕಾಯಿ   

ಬಾಗಲಕೋಟ: ಮೇಳದಲ್ಲಿದ್ದ ಪ್ರದರ್ಶನಕ್ಕೆ ಇಟ್ಟಿದ್ದ ತರಕಾರಿ ಬೆಳೆ ಸೋರೆಕಾಯಿಗೆ ರೈತರು ಮನಸೋತರು. ಉತ್ತಮ ಆರೋಗ್ಯಕ್ಕಾಗಿ, ತೂಕ ಇಳಿಸಲು ಸಹಕಾರಿಯಾಗಿರುವ ಸೋರೆಕಾಯಿಯು ಬೆಳೆದ ಜಾಗ ಕೇವಲ 50 ಅಡಿ ಉದ್ದ, 15 ಅಡಿ ಅಗಲದಲ್ಲಿ. ಒಂದು ಕಾಯಿ 5ರಿಂದ 10 ಕೆ.ಜಿ ತೂಕ ಇರುತ್ತದೆ.

ಈ ಕುರಿತು ಮಾತನಾಡಿದ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೋಹನ ಹಾಗೂ ಜ್ಯೋತಿ, ಸೋರೆಕಾಯಿ ಬೆಳೆಯಲು ಹೊಲಗಳ ಅಗತ್ಯವಿಲ್ಲ. 50 ಅಡಿಯಷ್ಟು ಜಾಗ ಸಾಕು. ರೈತರು ಉಪ ಉತ್ಪನ್ನವಾಗಿ ಬೆಳೆಯಬಹುದು ಎಂದು ಹೇಳಿದರು.

ಚಪ್ಪರ ನಿರ್ಮಿಸಿ ಸೋರೆಕಾಯಿ ಬೆಳೆದಿದ್ದೇವೆ. ಚಪ್ಪರ ನಿರ್ಮಿಸಿಸುವುದರಿಂದ ಕಾಯಿಗಳಿಗೆ ಯಾವುದೇ ಕ್ರೀಮಿ ಕೀಟಗಳ ಬಾಧೆ ಇರುವುದಿಲ್ಲ. ಹಾಸನ, ಮಂಡ್ಯ, ಮೈಸೂರ ಕಡೆಗಳಲ್ಲಿ ಕೈ ತುಂಬಾ ಕಾಸು ಸಂಪಾದಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೂ ರಾಜ್ಯದ ಸೋರೆಕಾಯಿ ಹೋಗುತ್ತಿದೆ’ ಎಂದು ಹೇಳಿದರು.

ADVERTISEMENT

ಮಹಾಲಿಂಗಪುರದ ರೈತ ಸಂಗಪ್ಪ ಕಟಗೇರಿ ಮಾತನಾಡಿ, ಜಿಲ್ಲೆಯಲ್ಲಿ ಸೋರೆಕಾಯಿಗೆ ಮಾರುಕಟ್ಟೆ ಇಲ್ಲ. ಇಲ್ಲಿಯ ಜನರು ಬಳಸುವುದು ಅತಿ ಕಡಿಮೆ. ಆದರೆ ಜನರಿಗೆ ಅದರ ಉಪಯೋಗ ಗೊತ್ತಾದರೆ ಬಳಕೆ ಹೆಚ್ಚುತ್ತದೆ ಎಂದು ಹೇಳಿದರು.

ಸೋರೆಕಾಯಿಗೆ ಚಪ್ಪರ ನಿರ್ಮಾಣಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ.  ಆದರೆ ರೋಗ ರುಜಿನ ತಡೆದು ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತಾರೆ ಅಧ್ಯಾಪಕ ಗಾಣಿಗೇರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.