ADVERTISEMENT

ಸೌಕರ್ಯದ ಕೊರತೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 7:05 IST
Last Updated 17 ಮಾರ್ಚ್ 2011, 7:05 IST
ಸೌಕರ್ಯದ ಕೊರತೆ: ಪ್ರತಿಭಟನೆ
ಸೌಕರ್ಯದ ಕೊರತೆ: ಪ್ರತಿಭಟನೆ   

ಬಾಗಲಕೋಟೆ: ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಸಮರ್ಪಕ ನಿರ್ವಹಣೆಗೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಕೆಲಹೊತ್ತು ರಸ್ತೆತಡೆದು ಪ್ರತಿಭಟನೆ ನಡೆಸಿದರು.ಕುಮಾರೇಶ್ವರ ಆಸ್ಪತ್ರೆ ಬಳಿಯ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿ ಧರಣಿ ಕುಳಿತ ಪ್ರತಿಭಟನಾ ಕಾರರು ಮೂಲಸೌಕರ್ಯಗಳ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಳೆ ಬಾಗಲಕೋಟೆಯಿಂದ ಕುಮಾರೇಶ್ವರ ಆಸ್ಪತ್ರೆ ಮೂಲಕ ನವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಬಾಗಲಕೋಟೆ-ನವನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿರುವುದ ರಿಂದ ಜನರು ಪರದಾಡುವಂತಾಗಿದೆ.
ಗಟಾರು-ಚರಂಡಿ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಕೊರತೆಯಿಂದಾಗಿ ಎಲ್ಲೆಡೆ ದುರ್ವಾಸನೆ ಹರಡಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಅರ್ಪಿಸಲಾಯಿತು. ಜೆಡಿಎಸ್‌ನ ಅಶೋಕ ಲಿಂಬಾವಳಿ, ಅಶೋಕ ಲಾಗಲೋಟಿ ಸೇರಿದಂತೆ ಅನೇಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಾಹಿತ್ಯ ಸಮ್ಮೇಳನಕ್ಕೆ ಪುಸ್ತಕ ಮಳಿಗೆ
ಬಾದಾಮಿ:
ಪಟ್ಟಣದಲ್ಲಿ ಮಾ. 26 ಮತ್ತು 27ರಂದು ನಡೆಯುವ ಜಿಲ್ಲಾ ಮಟ್ಟದ 3ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುಸ್ತಕ ಹಾಗೂ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಕುವವರು ಎಸ್.ಎನ್. ಮಠ ಅಧ್ಯಕ್ಷರು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸಮಿತಿ ಬಾದಾಮಿ 9480851100 ಇಲ್ಲವೆ 08357-220022 ಸಂಪರ್ಕಿಸಲು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.