ADVERTISEMENT

‘ಅಹಿಂದ ರಚನೆ ಯಾರ ವಿರುದ್ಧವೂ ಅಲ್ಲ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:14 IST
Last Updated 21 ಸೆಪ್ಟೆಂಬರ್ 2013, 8:14 IST

ಬಾಗಲಕೋಟೆ:‘ಜಿಲ್ಲೆಯ ಅಲ್ಪ­ಸಂಖ್ಯಾ­ತರು, ಹಿಂದುಳಿದವರು ಮತ್ತು ದಲಿತರ ಸಂಘಟನೆಗಾಗಿ ಮತ್ತು ಸೌಲಭ್ಯ ಒದಗಿ­ಸಲು ಅಹಿಂದ ಒಕ್ಕೂಟ ರಚನೆ­ಯಾಗಿದೆಯೇ ಹೊರತು ಚುನಾವಣೆ ಉದ್ದೇಶದಿಂದ ಅಲ್ಲ’ ಎಂದು ಮಾಜಿ ಸಚಿವ, ಅಹಿಂದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಬಿ. ತಿಮ್ಮಾಪುರ ತಿಳಿಸಿದರು.

ನಗರದ ಭಗಿನಿ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಹಿಂದ ಒಕ್ಕೂಟದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಅಹಿಂದ ಒಕ್ಕೂಟ ರಚನೆಯನ್ನು ತಪ್ಪಾಗಿ ಅರ್ಥೈಸುವ ಯತ್ನ ನಡೆಯು­ತ್ತಿರು­ವುದು ಸರಿಯಲ್ಲ’ ಎಂದರು.
‘ಅಹಿಂದ ಒಕ್ಕೂಟವು ಪಕ್ಷಾತೀತವಾಗಿ ರಚನೆಯಾಗಿದೆ. ಯಾವುದೇ ಪಕ್ಷ, ಜಾತಿ, ವ್ಯಕ್ತಿ ಅಥವಾ ಶಕ್ತಿಯ ವಿರುದ್ಧ ರಚನೆಯಾಗಿಲ್ಲ’ ಎಂದು ಹೇಳಿದರು.

‘ಮುಂಬರುವ ದಿನಗಳಲ್ಲಿ ಒಕ್ಕೂಟ­ವನ್ನು ಬಲಪಡಿಸುವ ಉದ್ದೇಶದಿಂದ ಇದೇ 26ರಿಂದ ಪ್ರತಿ ತಾಲ್ಲೂಕಿನಲ್ಲಿ ಸಭೆ ಕರೆದು ತಾಲ್ಲೂಕು ಸಮಿತಿಯನ್ನು ರಚಿಸಲಾಗುವುದು’ ಎಂದು ತಿಳಿಸಿದರು. ‘ಮುಖ್ಯಮಂತ್ರಿ ಆದ ಬಳಿಕ ಅಹಿಂದಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಸಿದ್ದ­ರಾಮಯ್ಯ ಅವರನ್ನು ಶೀಘ್ರದಲ್ಲೇ ಜಿಲ್ಲೆಗೆ ಆಹ್ವಾನಿಸಿ ಸನ್ಮಾನಿಸ­ಲಾಗು­ವುದು’ ಎಂದರು.

‘ಅಹಿಂದ ಸಂಘಟನೆಗೆ ಯಾರೇ ಬೆಂಬಲಿಸಿದರೂ ಸ್ವಾಗತ. ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿ­ಗಳನ್ನು ಭೇಟಿ ಮಾಡಿ ಅಹಿಂದ ಬಲಪಡಿಸಲು ಬೆಂಬಲ ಯಾಚಿಸು­ವೆವು’ ಎಂದರು. ಅಹಿಂದ ಒಕ್ಕೂಟದ ಪ್ರಮುಖರಾದ ಅಶೋಕ ಲಿಂಬಾವಳಿ, ಡಾ.ದೇವರಾಜ ಪಾಟೀಲ, ಮುತ್ತಣ್ಣ ಬೆಣ್ಣೂರ, ಅಶೋಕ ಲಾಗಲೂಟಿ, ಎಂ.ಎಲ್‌. ಶಾಂತ­ಗೇರಿ, ಶಂಭುಗೌಡ ಪಾಟೀಲ, ಡಾ.ಬಾಬು ರಾಜೇಂದ್ರ ನಾಯಕ, ಡಾ. ಶೇಖರ ಮಾನೆ, ಗಂಗುಬಾಯಿ ಮೇಟಿ, ರವೀಂದ್ರ ಕಲ­ಬುರ್ಗಿ, ಎಸ್‌.ಎಂ. ಇದ್ದಲಗಿ, ಮೈನು­ದ್ದೀನ್‌ ನಬೀವಾಲೆ, ನೂರ್‌ ಅಹ್ಮದ್‌ ಪಟ್ಟೇವಾಲೆ, ರಜಾಕ್‌ ಹಳ್ಳೂರ, ಮಹಾ­ದೇವ ಹೊಸೆಟ್ಟಿ, ಕೃಷ್ಣ ಲಮಾಣಿ, ಎಸ್‌.ಎಸ್‌. ದೊಡ್ಡಮನಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.