ADVERTISEMENT

‘ನೌಕರಿ ಕೊಡಿಸುವೆ ಎನ್ನುವ ವಂಚಕರಿಗೆ ಮರುಳಾಗಬೇಡಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:44 IST
Last Updated 17 ಸೆಪ್ಟೆಂಬರ್ 2013, 6:44 IST

ಬೀಳಗಿ: ನಮ್ಮ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಜನರ ಮುಂದೆ ಹೇಳುತ್ತ ಅರ್ಜಿದಾರರಿಗೆ ಆಮಿಷ ಒಡ್ಡಿ ಕೆಲವರು  ಹಣ  ಕೀಳುತ್ತಿರುವುದಾಗಿ ಕೇಳಿ ಬರತೊಡಗಿದೆ. ಅರ್ಜಿದಾರರು ಅಂಥ ವಂಚಕರ ಮಾತಿಗೆ ಮರುಳಾಗಿ ಹಣ ಕೊಡಕೂಡದು ಎಂದು ಬೀಳಗಿ ಪಟ್ಟಣ ಸಹಕಾರಿ ಬಾ್ಯಂಕಿನ ಪ್ರಧಾನ ವ್ಯವಸಾ್ಥಪಕ ಎಲ್.ಬಿ. ಕುರ್ತಕೋಟಿ ತಿಳಿಸಿದ್ದಾರೆ.

ಸಚಿವರೂ, ಬೀಳಗಿ ಸಕ್ಕರೆ ಕಾರ್ಖಾನೆ  ಅಧ್ಯಕ್ಷರೂ ಆಗಿರುವ ಎಸ್ಆರ್ ಪಾಟೀಲರು ಕೃಷಾ್ಣ ಮೇಲ್ದಂಡೆ ಯೋಜನೆಯಡಿ ಘಾಸಿಗೊಂಡಿದ್ದ ತಾಲ್ಲೂಕಿನ ಸಂತ್ರಸ್ತರ ಬವಣೆಯನ್ನು ಕಂಡು ಅವರಿಗೆ ಆರ್ಥಿಕವಾಗಿ ಸ್ವಲ್ಪವಾದರೂ ನೆರವು ನೀಡಬೇಕೆಂಬ ಸದುದ್ದೇಶದಿಂದ 15 ವರ್ಷಗಳ ಹಿಂದೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಾರಂಭಿಸಿದರು. ಸದ್ಯಕ್ಕೆ ಮುಖ್ಯ ಕಚೇರಿಯೊಂದಿಗೆ 5ಶಾಖೆಗಳಿದ್ದು ಒಟ್ಟು 48ಜನ ಸಿಬ್ಬಂದಿ ಹೊಂದಿವೆ. ಇನ್ನೂ 5ಶಾಖೆಗಳನ್ನು ಪ್ರಾರಂಭಿಸಿಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಮತಿ ನೀಡಿದೆ.

ಬಾ್ಯಂಕ್ ಆರಂಭ­ವಾದಾಗಿನಿಂದ ಇಂದಿನವರೆಗೂ ಅರ್ಹತೆಯ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಯಾರಿಂದಲೂ ಒಂದೇ ಒಂದು ಪೈಸೆ ತೆಗೆದುಕೊಂಡಿಲ್ಲ.  ಸದ್ಯದ ಸಂದರ್ಭದಲ್ಲಿ ಒಂದಿಷು್ಟ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದ್ದು ಅವುಗಳನ್ನು ಕೂಡಾ ಅರ್ಹತೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.

ಬಾ್ಯಂಕಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಹುದ್ದೆಗಳಲ್ಲಿರುವವರು ನಮಗೆ ಪರಿಚಯಸ್ಥರಾಗಿದ್ದಾರೆ. ಅವರಿಗೆ ಹೇಳಿ ನೌಕರಿ ಕೊಡಿಸುತ್ತೇವೆಂದು ಹೇಳುತ್ತ ಅರ್ಜಿ ಹಾಕಿದವರಿಂದ ದುಡ್ಡು ಕೀಳತೊಡಗಿ­ದ್ದಾರೆ ಎಂದು ಸುದ್ದಿ ಹಬ್ಬತೊಡಗಿದೆ. ಆದ ಕಾರಣ ಬಾ್ಯಂಕಿಗೆ ಯಾವುದೇ ಹುದ್ದೆಗೆ ಅರ್ಜಿ ಹಾಕಿದ­ವರು ಯಾರ ಮಾತಿಗೂ ಮರುಳಾಗದೇ, ಹಣ ಕೊಡದೇ ಜಾಗರೂಕತೆಯಿಂದ ಇರಬೇಕು, ಒಂದು ವೇಳೆ ಯಾರಾದರೂ ಹಣ ಕೊಟ್ಟಿದ್ದಲ್ಲಿ ಅದಕ್ಕೆ ಅವರೇ ಹೊಣೆಗಾರರು. ಬಾ್ಯಂಕಿನ ಆಡಳಿತ ಮಂಡಳಿಯ ನಿರ್ದೇಶಕ ಮಂಡಳಿ ಸದಸ್ಯರಾಗಲೀ, ಯಾವುದೇ ಸಿಬ್ಬಂದಿ­ಯಾಗಲೀ ಜವಾಬಾ್ದರರಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.