ADVERTISEMENT

ದೇಸಿ ಕಲೆ ಉಳಿಸಿ ಬೆಳೆಸಲು ಸಲಹೆ

ಪಾಪಣ್ಣ ವಿಜಯ ಗುಣಸುಂದರಿ ಕಥಾನಕ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 3:21 IST
Last Updated 8 ಜುಲೈ 2025, 3:21 IST
ರಬಕವಿ ಬನಹಟ್ಟಿಯಲ್ಲಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದವರು ‘ಪಾಪಣ್ಣ ವಿಜಯ ಗುಣಸುಂದರಿ’ ಯಕ್ಷಗಾನ ಕಥಾನಕ ಪ್ರದರ್ಶಿಸಿದರು
ರಬಕವಿ ಬನಹಟ್ಟಿಯಲ್ಲಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದವರು ‘ಪಾಪಣ್ಣ ವಿಜಯ ಗುಣಸುಂದರಿ’ ಯಕ್ಷಗಾನ ಕಥಾನಕ ಪ್ರದರ್ಶಿಸಿದರು   

ರಬಕವಿ ಬನಹಟ್ಟಿ: ‘ದೇಸಿ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಯಕ್ಷಗಾನ ಕಲೆಯನ್ನು ಮುಂದಿನ ಜನಾಂಗಕ್ಕೆ ನೀಡುವ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯಬೇಕು’ ಎಂದು ರಬಕವಿ ಬನಹಟ್ಟಿಯ ಹೋಟೆಲ್ ಮಾಲೀಕರ ಸಂಘದ ಮುಖಂಡ ಬಾಬು ಮೊಯ್ಲಿ ತಿಳಿಸಿದರು.

ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿರುವ ರಂಗ ಮಂದಿರದಲ್ಲಿ ಸ್ಥಳೀಯ ಹೋಟೆಲ್ ಮಾಲೀಕರ ಸಂಘ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರು ಈಚೆಗೆ ಹಮ್ಮಿಕೊಂಡಿದ್ದ ಪಾಪಣ್ಣ ವಿಜಯ ಗುಣಸುಂದರಿ ಕಥಾನಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಪಾತ್ರಧಾರಿ ಜಿ.ರಾಘವೇಂದ್ರ ಮಯ್ಯ ಮಾತನಾಡಿ, ‘ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯು 39 ವರ್ಷಗಳಿಂದ ನಿರಂತರರಾಗಿ ರಾಜ್ಯದಾದ್ಯಂತ ಯಕ್ಷಗಾನ ಪ್ರದರ್ಶನ ಮಾಡುತ್ತಾ ಬಂದಿದೆ. ಎಲ್ಲ ಭಾಗಗಳು ಜನರು ನಮ್ಮ ಕಲೆಯನ್ನು ಸ್ವೀಕರಿಸಿ, ಪ್ರೋತ್ಸಾಹಿಸಿದ್ದಾರೆ’ ಎಂದರು.

ADVERTISEMENT

ಜಿ.ರಾಘವೇಂದ್ರ ಮಯ್ಯ, ಉಮೇಶ ಮರಾಠೆ ಭಾಗವತರಾಗಿ, ಮಾಧವ ನಾಗೂರ, ರವೀಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳಸುರುಳಿ ಸ್ತ್ರೀ ಪಾತ್ರಧಾರಿಗಳಾಗಿ, ಕಾರ್ತಿಕ ಪಾಂಡೇಶ್ವರ, ಚೌಕುಳಮಕ್ಕಿ ಬಸವ ಹಾಸ್ಯ ಕಲಾವಿದರಾಗಿ ಅಭಿನಯಿಸಿರು. ರಮೇಶ ಭಂಡಾರಿ ಮದ್ದಳೆ ಹಾಗೂ ಗುರುರಾಜ ಪಡಿಯಾರ ಚಂಡೆಯನ್ನು ನುಡಿಸಿದರು.

ವಿಶ್ವನಾಥ ಗಾಣಿಗ, ಚಂದ್ರಹಾಸ ಗೌಡ, ಪ್ರಸನ್ನಕುಮಾರ ರಜತಕುಮಾರ, ಪ್ರಸನ್ನ ಶೆಟ್ಟಿಗಾರ, ನಿತ್ಯಾನಂದ ಆಲೂರು, ನಾರಾಯಣ ನಾಯ್ಕ, ವಿಘ್ನೇಶ ಚಾರ ಮುಮ್ಮೇಳ ಕಲಾವಿದರಾಗಿದ್ದರು.

ರತ್ನಾಕರ ಶೆಟ್ಟಿ, ಎನ್.ಭುಜಂಗ ಮೊಯ್ಲಿ, ರಾಘವೇಂದ್ರ, ಗಿರೀಶಗೌಡ, ರವಿ ದೇವಾಡಿಗ, ವಿನಯ ಪೂಜಾರಿ, ಜಗದೀಶ ದೇವಾಡಿಗ, ಪ್ರಕಾಶ ಮಂಡಿ, ಮಲ್ಲಿಕಾರ್ಜುನ ತುಂಗಳ, ವೆಂಕಟೇಶ ಕುಲಕರ್ಣಿ, ಮಹಾದೇವ ಕವಿಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.