ADVERTISEMENT

ದುಶ್ಚಟಗಳಿಂದ ದೂರವಿರಲು ಸಲಹೆ: ಎಂ.ಕೆ.ಹಾವೋಜಿ

​ಪ್ರಜಾವಾಣಿ ವಾರ್ತೆ
Published 16 ಮೇ 2025, 13:58 IST
Last Updated 16 ಮೇ 2025, 13:58 IST
ಬೇವೂರಿನ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ  ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ.ಕೆ.ಹಾವೋಜಿ ಮಾತನಾಡಿದರು
ಬೇವೂರಿನ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ  ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ.ಕೆ.ಹಾವೋಜಿ ಮಾತನಾಡಿದರು   

ರಾಂಪುರ: ‘ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನಶೈಲಿ ರೂಢಿಸಿಕೊಂಡು ಆರೋಗ್ಯವಂತರಾಗಿ ಬಾಳಬೇಕು’ ಎಂದು ಕೊಪ್ಪಳದ ಎಂ.ಕೆ.ಹಾವೋಜಿ ಹೇಳಿದರು.

ಸಮೀಪದ ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಎನ್.ಎಸ್.ಎಸ್. ಹಾಗೂ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆಧುನಿಕ ಕಾಲಘಟ್ಟದಲ್ಲಿ ಒತ್ತಡದ ಬದುಕಿನಲ್ಲಿರುವ ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು’ ಎಂದರು.

ADVERTISEMENT

ಪ್ರಾಚಾರ್ಯ ಜಗದೀಶ ಭೈರಮಟ್ಟಿ, ಬಿ.ಬಿ.ಬೇವೂರ, ಎಸ್.ಎಸ್.ಆದಾಪೂರ, ಎಸ್.ಬಿ.ಹಂಚಿನಾಳ,ಜಿ.ಎಸ್.ಗೌಡರ, ಡಿ.ವೈ.ಬುಡ್ಡಿಯವರ, ಎ.ಎಂ.ಗೊರಚಿಕ್ಕನವರ, ನಾಗಲಿಂಗೇಶ ಬೆಣ್ಣೂರ ಇದ್ದರು.

ಎನ್‌ಎಸ್ಎಸ್ ಘಟಕದ ವತಿಯಿಂದ ನಡೆದ ಶ್ರಮದಾನದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣ ಸ್ವಚ್ಛತಾ ಕಾಯ೯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.