ರಬಕವಿ ಬನಹಟ್ಟಿ: ಇಲ್ಲಿನ ಶಂಕರಲಿಂಗ ದೇವಸ್ಥಾನದ ಟ್ರಸ್ಟ್ ಸದಸ್ಯರು ಮಲ್ಲಿಕಾರ್ಜುನ ದೇವರ ಜಾತ್ರೆಯ ಅಂಗವಾಗಿ ಈಚೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು.
ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ ಮಾತನಾಡಿ, ಮಲ್ಲಿಕಾರ್ಜುನ ದೇವರ ಜಾತ್ರೆಯ ಸಂದರ್ಭದಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಜಾತ್ರೆಗೆ ವಿವಿಧ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಭಾಗದಿಂದ ಬರುವ ಪಲ್ಲಕ್ಕಿಗಳು ಕೃಷ್ಣಾ ನದಿಯಲ್ಲಿ ಮಡಿ ಸ್ನಾನ ಮಾಡಿಕೊಂಡು ಜಾತ್ರೆಗೆ ಬರುವುದು ರೂಢಿಯಾಗಿದೆ.
ಎಂ.ಎಸ್. ಬದಾಮಿ, ರೇವಣಸಿದ್ಧ ಉಮದಿ, ಭೀಮಶಿ ಪಾಟೀಲ, ಶಿವಾನಂದ ಹೊಸಮನಿ, ಸಂಗಮೇಶ ಹತಪಕಿ, ಈಶ್ವರ ನಾಗರಾಳ, ಬಸವರಾಜ ಅಮ್ಮಣಗಿಮಠ, ಬಸು ಗುಣಕಿ, ಬಕ್ಕನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.