ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ಪಿಕೆಪಿಎಸ್ ಸಂಘದ ವಾರ್ಷಿಕ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪೂಜ್ಯರು, ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿದರು
ಬೀಳಗಿ: ‘ಸತತ 33 ವರ್ಷಗಳಿಂದ ಸಂಘ ಲಾಭಗಳಿಸುತ್ತ ಬಂದಿದ್ದು, ನೂರಕ್ಕೆ ನೂರರಷ್ಟು ಸಾಲ ವಸೂಲಾತಿ ಮಾಡಿದೆ. ಗ್ರಾಹಕರ ಅನುಕೂಲಕ್ಕಾಗಿ ರಸಗೊಬ್ಬರ, ಸಿಮೆಂಟ್, ಕಬ್ಬಿಣ ಮತ್ತು ಸೂಪರ ಮಾರ್ಕೆಟ್ ಮೂಲಕ ನಿತ್ಯ ಬಳಕೆಯ ಸಾಮಗ್ರಿಗಳ ಮಾರಾಟ ಮಾಡಲಾಗುತ್ತಿದೆ’ ಎಂದು ಪಿಕೆಪಿಎಸ್ ಅಧ್ಯಕ್ಷ ಎಂ.ಬಿ.ಕಂಬಿ ಹೇಳಿದರು.
ತಾಲ್ಲೂಕಿನ ಅನಗವಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಸಂಘ ₹108.80 ಲಕ್ಷ ಸದಸ್ಯರ ಶೇರು, ₹1029.32 ಲಕ್ಷ ಠೇವುಗಳನ್ನು ಹೊಂದಿ, ₹595.74 ಲಕ್ಷ ರೈತರಿಗೆ ಸಾಲ ವಿತರಿಸಿದೆ. ₹1780.68 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ₹22.02 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ10 ರಷ್ಟು ಡಿವಿಡೆಂಡ್ ಕೊಡಲು ನಿರ್ಧರಿಸಲಾಗಿದೆ’ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಐ.ಎಂ.ಕಂಬಿ 2024-25ನೇ ಸಾಲಿನ ವಾರ್ಷಿಕ ವರದಿ ಹಾಗೂ ಆಯ-ವ್ಯಯ ಮಂಡಿಸಿ ಮಂಜೂರಿ ಪಡೆದು ಸಂಘ ಉತ್ತಮವಾಗಿ ಕಾರ್ಯನಿರ್ವಹಿಸಿ ಹಲವಾರು ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೀತಂ ಕುಟಕನಕೇರಿ, ತೈಸೀನ ದಳವಾಯಿ, ಬೇಬಿ ಮನಗೂಳಿ ಇವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಉತ್ತಮ ಗ್ರಾಹಕರಾದ ಹುಸೇನಸಾಬ ನದಾಫ್, ಅಬ್ದುಲ್‌ರಜಾಕ ಮುಜಾವರ, ಶ್ರೀಶೈಲ ಕೂಗಲಿ, ಫಕೀರಯ್ಯ ಮಠಪತಿ, ಚಿನ್ನಪ್ಪ ಹಂಚಿನಾಳ, ರುದ್ರಪ್ಪ ಮೇಟಿ ಹಾಗೂ ದಿನಗೂಲಿ ಕಾರ್ಮಿಕರಾದ ಮಲ್ಲಪ್ಪ ಮಂತ್ರಿ, ಸಾವಿತ್ರಿ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಂಘದಲ್ಲಿ 38 ವರ್ಷ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಎಸ್.ಮಠಪತಿ ಅವರನ್ನು ಸನ್ಮಾನಿಸಲಾಯಿತು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷ ಎಸ್.ಜಿ. ಅಕ್ಕಿಮರಡಿ, ನಿರ್ದೇಶಕರಾದ ರುದ್ರಪ್ಪ ಮೇಟಿ, ಆರ್.ಎಂ. ಮುಜಾವರ, ಸಿ.ಬಿ. ಹಂಚಿನಾಳ, ಬಿ.ಎಂ. ಛಬ್ಬಿ, ಎಸ್.ಕೆ. ಮಾದರ, ಸಾವಿತ್ರಿ ಸಂಕಿನಮಠ, ಸುಲೋಚನಾ ಗಿರಿಯನ್ನವರ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ವಿ.ಎಂ.ಹಗರನ್ನವರ, ಸಿ.ಎ ಬಸವರಾಜ ಹಾದಿಮನಿ ಇದ್ದರು. ಪಿ.ಬಿ. ಮಠಪತಿ ನಿರೂಪಿಸಿದರು. ಕುಟಕನಕೇರಿ ಸ್ವಾಗತಿಸಿದರು. ಜ್ಯೋತಿ ಕಂಬಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.