ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ಸೇಬು ಹಣ್ಣು ಬೆಳೆದ ಶ್ರೀಶೈಲ ತೇಲಿ ಅವರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ನಲ್ಲಿ ಉಲ್ಲೇಖಿಸಿದ್ದಾರೆ.
‘ಗುಡ್ಡಗಾಡು ಪ್ರದೇಶದಲ್ಲಿ ಸೇಬು ಬೆಳೆಬಹುದು ಎನ್ನುವುದನ್ನು ಸುಳ್ಳಾಗಿಸಿ ಬಯಲು ಪ್ರದೇಶ, 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವಲ್ಲಿ ತೇಲಿ ಅವರು ಸೇಬು ಬೆಳೆದು ತೋರಿಸಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‘ಗ್ರಾಮವೊಂದರಲ್ಲಿ ವಾಸವಿರುವ ನನ್ನ ಬಗ್ಗೆ ಪ್ರಧಾನಿಯವರು ಮನ್ ಕಿ ಬಾತ್‌ನಲ್ಲಿ ಉಲ್ಲೇಖಿಸಿದ್ದು ಖುಷಿ ತಂದಿದೆ. ದ್ರಾಕ್ಷಿ ಬೆಳೆಯಿಂದ ನಾಶವಾದಾಗ, ಸ್ನೇಹಿತರ ಜೊತೆ ಚರ್ಚಿಸಿ ಸಾವಯವ ಪದ್ಧತಿಯಲ್ಲಿ ಸೇಬು ಬೆಳೆದೆ. ಎರಡು ವರ್ಷಗಳ ಹಿಂದೆ 7 ಎಕರೆ ಜಮೀನಿನಲ್ಲಿ ಸೇಬು ಬೆಳೆದೆ. ಈಗಾಗಲೇ ಒಮ್ಮೆ ಫಸಲು ಬಂದಿದ್ದು, ಉತ್ತಮ ಬೆಲೆ ಸಿಕ್ಕಿದೆ. ಎರಡನೇ ಫಸಲಿನ ನಿರೀಕ್ಷೆಯಲ್ಲಿದ್ದೇನೆ’ ಎಂದು ಶ್ರೀಶೈಲ ತೇಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.