ADVERTISEMENT

ಜಮಖಂಡಿ | ಪಿಎಸ್‌ಐ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದವನ ಬಂಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:06 IST
Last Updated 31 ಅಕ್ಟೋಬರ್ 2024, 14:06 IST
ವಿಜಯಕುಮಾರ ಬರಲಿ
ವಿಜಯಕುಮಾರ ಬರಲಿ   

ಜಮಖಂಡಿ: ಶಹರ ಠಾಣೆ ಪಿಎಸ್‌ಐ ಅನೀಲ ಕುಂಬಾರ ಹೆಸರಿನಲ್ಲಿ ಐದು ನಕಲಿ ಫೇಸ್‌ಬುಕ್ ಖಾತೆ ಮತ್ತು ಒಂದು ಇನ್‌ಸ್ಟಾಗ್ರಾಂ ಖಾತೆ ತೆರೆದ ಆರೋಪಿಯನ್ನು ಬಂಧಿಸಲಾಗಿದೆ.

ಪಿಎಸ್‌ಐ ಸಮವಸ್ತ್ರದ ಮೇಲಿನ ಹಾಗೂ ಇನ್ನಿತರ ಚಿತ್ರಗಳನ್ನು ಬಳಸಿಕೊಂಡು ರಾಜಕೀಯ ಮುಖಂಡರಿಗೆ ಹಾಗೂ ಮಹಿಳೆಯರಿಗೆ ಸಂದೇಶ ಕಳುಹಿಸಿ ವಂಚನೆ ಮಾಡುತ್ತಿದ್ದು ಹಾಗೂ ಹಣ ಬೇಡಿಕೆ ಇಡುತ್ತಿರುವ ಬಗ್ಗೆ ಮಾಹಿತಿ ತಿಳಿದಾಗ ಪಿಎಸ್ಐ ಅನೀಲ ಕುಂಬಾರ ಬಾಗಲಕೋಟೆ ಸಿಇಎನ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಥಣಿ ತಾಲ್ಲೂಕಿನ ವಿಜಯಕುಮಾರ ಎಂಬುವವನನ್ನು ಮುಂಬೈನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.