ಮಹಾಲಿಂಗಪುರ: ‘ಆಧುನಿಕತೆ ಪ್ರಭಾವದಿಂದ ಗ್ರಾಮೀಣ ಭಾಗದ ಕಲಾವಿದರು ತೆರೆಮರೆಗೆ ಸರಿಯುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ’ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದಲ್ಲಿ ಪ್ರಭುಲಿಂಗೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಪ್ರಭುಲಿಂಗೇಶ್ವರ ಕಲೆ ಮತ್ತು ಸಾಂಸ್ಕೃತಿಕ ನಾಟ್ಯ ಸಂಘದಿಂದ ಹಮ್ಮಿಕೊಂಡ ‘ಶೆರೆ ಅಂಗಡಿ ಸಂಗವ್ವ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ನಾಟಕಗಳಿಗೆ ಸಂಗೀತ ಕಲಾವಿದರೇ ಜೀವಾಳವಾಗಿದ್ದಾರೆ. ನಾಟಕದ ಪ್ರತಿ ಸನ್ನಿವೇಶಗಳಿಗೆ ತಕ್ಕಂತೆ ಸುಶ್ರಾವ್ಯವಾಗಿ ಹಾಡಿ, ಸಂದರ್ಭಕ್ಕೆ ತಕ್ಕಂತೆ ಸಂಗೀತದ ಮೂಲಕ ಮನಸು ಮುದಗೊಳಿಸುವ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದರು.
ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಸಾನಿಧ್ಯ ವಹಿಸಿದ್ದರು. ಶಂಕರ ಬಟಕುರ್ಕಿ, ರವೀಂದ್ರ ಕೋರೆ, ಚನ್ನಪ್ಪ ಬಿಳ್ಳೂರ, ನಿಂಗಣ್ಣ ಪೂಜಾರಿ, ಸಂಗಮೇಶ ಬಾಬಾಗೌಡ ಪಾಟೀಲ, ಹಣಮಂತ ನೇಸೂರ, ಪ್ರಭು ಮುಧೋಳ, ಆನಂದ ಕವಟಿ, ಪ್ರಕಾಶ ಪಾಟೀಲ, ಶಿವಪ್ಪ ನಾಗನೂರ, ಮಹಾಂತೇಶ ಜಾಲಿಕಟ್ಟಿ, ಅಶೋಕ ಮೋಟಗಿ, ರಾಜು ಬಗನಾಳ, ಶೌಕತ ಮಿರ್ಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.