ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣವಾಗಿರುವ ಬಾದಾಮಿ ರೈಲ್ವೆ ಸ್ಟೇಷನ್‌ನಲ್ಲಿ ಹೆಚ್ಚಿನ ರೈಲು ಸೌಲಭ್ಯವನ್ನು ಒದಗಿಸಿ ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶನಿವಾರ ಸಂಸದ ಪಿ.ಸಿ.ಗದ್ದಿಗೌಡರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರವಾಸಿ ಸ್ಥಳಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಾದ ಮಹಾಕೂಟ, ಬನಶಂಕರಿ ಮತ್ತು ಶಿವಯೋಗಮಂದಿರ ಹೋಗಲು ಬಾದಾಮಿ ನಿಲ್ದಾಣಕ್ಕೆ ಪ್ರವಾಸಿಗರು ಬರುವರು. ಎಲ್ಲ ರೈಲುಗಳ ನಿಲುಗಡೆಯಾಗಿ ಪ್ರವಾಸಿಗರಿಗೆ ಸೌಲಭ್ಯ ದೊರೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಯಶವಂತಪುರ-ಬಿಕೆನೇರ ರೈಲು ನಿಲ್ದಾಣದಲ್ಲಿ ನಿಲುಗಡೆ, ವಿಜಯಪುರ-ಯಶವಂತಪುರ, ಹೊಸಪೇಟೆ-ಮುಂಬಯಿ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವುದು ಮತ್ತು ಹುಬ್ಬಳ್ಳಿ-ವಾರಣಾಸಿ ವಾರಕ್ಕೆ ಎರಡು ಸಲ ಸಂಚರಿಸಬೇಕು. ವಿಜಯಪುರ-ಬೆಂಗಳೂರಿಗೆ ‘ ವಂದೇ ಮಾತರಂ ’ ರೈಲು ಆರಂಭಿಸಬೇಕು ಎಂದು ಆಗ್ರಹಿಸಿದರು.
ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಮತ್ತು ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.