ಗುಳೇದಗುಡ್ಡ: ಪಟ್ಟಣದ ನೆಹರು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸಿ.ಬಿ.ಎಸ್.ಇ. ಹತ್ತನೇ ತರಗತಿಯ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಒಟ್ಟು 50 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ತೇಜಶ್ವಿನಿ ಗುಲಗಂಜಿ ಪ್ರಥಮ, ಅಮೃತಾ ಸಜ್ಜನ ದ್ವಿತೀಯ, ಭಾಗ್ಯಶ್ರೀ ಗೋವನ್ನವರ ತೃತೀಯ ಸ್ಥಾನ ಪಡೆದಿದ್ದಾರೆ, ಕ್ರಮವಾಗಿ, ನಂದಿತಾ ಚಿತ್ತರಗಿ, ಸ್ಟೆಲ್ಲಾ ಝಳಕಿ, ಮಹಾಂತೇಶ ಅಂಗಡಿ, ಹರ್ಷಿತಾ ಮಾಯಾಚಾರಿ, ಶ್ರೀಜಾ ಮಾಚಾ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ್, ಅಧ್ಯಕ್ಷ ಮಹಾಂತಯ್ಯ ಸರಗಣಾಚಾರಿ, ಉಪಾಧ್ಯಕ್ಷ ವಿರೇಶ ಚಿಂದಿ ಮತ್ತು ಶಾಲೆಯ ಪ್ರಾಚಾರ್ಯರರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.