ಕುಳಗೇರಿ ಕ್ರಾಸ್: ಹೋಬಳಿಯ ಚಿಮ್ಮನಕಟ್ಟಿ ಗ್ರಾಮದ ₹20 ಲಕ್ಷ ವೆಚ್ಚದ ಅಲ್ಪಸಂಖ್ಯಾತರ ಕಾಲೊನಿಯ ಸಿಸಿ ರಸ್ತೆ ನಿರ್ಮಾಣ ಹಾಗೂ ಆಲೂರು ಎಸ್.ಕೆ ಗ್ರಾಮದ ₹8 ಕೋಟಿ ವೆಚ್ಚದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಆಲೂರು ಎಸ್.ಕೆ ಗ್ರಾಮದ ಸುತ್ತ ಹತ್ತಾರು ಗ್ರಾಮಗಳಿಗೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ಸುತ್ತಲೂ ಸುಮಾರು ಎರಡ್ಮೂರು ಕಿ.ಮೀ.ವರೆಗೂ ಅಂತರ್ಜಲ ಅಭಿವೃದ್ದಿ ಸಾಧಿಸುವುದರಿಂದ ರೈತರು ಕೊಳುವೆಬಾವಿಗಳನ್ನು ಕೊರೆಸಿದ ಸಂಧರ್ಭದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಒದಗಿಸಲು ಈ ಬ್ರೀಜ್ ಕಮ್ ಬ್ಯಾರೇಜ್ ಹೆಚ್ಚು ಉಪಯುಕ್ತವಾಗಿದೆ’ ಎಂದರು.
‘ನಮ್ಮ ತಂದೆ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ 1978ರಲ್ಲಿನ ಶಾಸಕರ ಅವಧಿಯಲ್ಲಿ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಮಾಡಿ ಈ ಭಾಗದ ಸಾವಿರಾರು ರೈತರಿಗೆ ಎಡದಂಡೆ ಕಾಲುವೆಯ ನೀರಿನಿಂದ ಬಹುತೇಕ ಜಮೀನುಗಳು ನೀರಾವರಿ ಸೌಲಭ್ಯ ಹೊಂದಿದೆ. ಅದರಂತೆ ನನ್ನ ಅವಧಿಯಲ್ಲಿ ₹ 8 ಕೋಟಿ ವೆಚ್ಚದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದರು. ಗ್ರಾಮದ ಯುವಕರಿಗೆ ಹಾಗೂ ಯುವತಿಯರಿಗೆ ಯಾರೇ ಇರಲಿ ಎಲ್ಲರೂ ಉತ್ತಮ ಶಿಕ್ಷಣ ಪಡೆದುಕೊಂಡು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಿ ಎಂದು ತಿಳಿಸಿದರು.
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರನಗೌಡ ಕರಿಗೌಡ್ರ, ಶ್ರೀಕಾಂತಗೌಡ ಗೌಡರ, ಭೀಮನಗೌಡ ಪಾಟೀಲ, ಕರಿಗೌಡ ಮುಷ್ಟಿಗೇರಿ, ಪಿಕೆಪಿಎಸ್ ಅಧ್ಯಕ್ಷ ಎನ್.ಎಸ್.ಉದ್ದನ್ನವರ, ಗ್ರಾ.ಪಂ. ಸದಸ್ಯ ವೀರಯ್ಯ ಮೂಗನೂರಮಠ, ಪ್ರವೀಣ ಅಸೂಟಿ, ವಿಠ್ಠಲ ದ್ಯಾವನಗೌಡ್ರ, ಸಿದ್ದಪ್ಪ ಉದ್ದನ್ನವರ, ಹನುಮಂತಗೌಡ ಭರಮಗೌಡ್ರ, ಚಂದಪ್ಪ ಹಿರ್ಲವರ, ಪುಂಡಲೀಕ ಚನ್ನಗೌಡ್ರ, ಸಿದ್ದಪ್ಪ ಹಿರ್ಲವರ, ಬಸವರಾಜ ಹಿರ್ಲವರ, ಮೇಗುಂಡಿ ಚಿಕ್ಕೊಪ್ಪ, ಬಸವರಾಜ ನೀರಲಕೇರಿ, ಹನುಮಂತ ಚಿಕ್ಕೊಪ್ಪ, ಮಹಾಂತೇಶ ಹೊಸಮನಿ, ಯಲ್ಲಪ್ಪ ತಳವಾರ, ಸಿದ್ದಾರೂಢ ನೀರಲಕೇರಿ, ಅಪ್ಪೇಶಿ ನರಸನ್ನವರ, ಸಣ್ಣ ನೀರಾವರಿ ಇಲಾಖೆ ಎಇಇ ಪ್ರಕಾಶ ನಾಯ್ಕ್, ಪಿಡಿಒ ಎಸ್.ಎನ್.ತೋಟರ್, ಗುತ್ತಿಗೆದಾರ ಎಸ್.ಬಿ.ಪವಾರ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.