ADVERTISEMENT

ಬಾಗಲಕೋಟೆ | ಕಾಂಗ್ರೆಸ್‌ ಕಿತ್ತಾಟ; ಜೆಡಿಎಸ್‌ಗೆ ಅದೃಷ್ಟ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಬಣ ರಾಜಕೀಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 21:30 IST
Last Updated 30 ಆಗಸ್ಟ್ 2024, 21:30 IST
   

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್‌ ಶಾಸಕ ಭೀಮಸೇನ ಚಿಮ್ಮನಕಟ್ಟಿ ನಡುವಿನ ಕಿತ್ತಾಟದ ಪರಿಣಾಮ ಬಹುಮತವಿಲ್ಲದ ಜೆಡಿಎಸ್‌ ಸದಸ್ಯರೊಬ್ಬರು ಶುಕ್ರವಾರ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದರು.

ಪುರಸಭೆಯಲ್ಲಿ 23 ಸದಸ್ಯರಿದ್ದಾರೆ. 15 ಮಂದಿ ಕಾಂಗ್ರೆಸ್‌, ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಒಬ್ಬರು, ಐವರು ಜೆಡಿಎಸ್‌, ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್‌ ಭರ್ಜರಿ ಬಹುಮತ ಹೊಂದಿದ್ದರೂ, ಕಿತ್ತಾಟದಿಂದ ಅಧಿಕಾರದಿಂದ ವಂಚಿತವಾಗಿದೆ.

ಈ ಹಿಂದೆ ಬಾದಾಮಿ ಶಾಸಕರೂ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನ ಬಳಗದ 10 ಮಂದಿ ಪರವಾಗಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಆಲೂರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಣದಲ್ಲಿ ಆರು ಮಂದಿ ಪರವಾಗಿ ವಂದನಾ ಭಟ್ಟಡ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‌ನಿಂದ ಜ್ಯೋತಿ ಗೋವಿನಕೊಪ್ಪ ನಾಮಪತ್ರ ಸಲ್ಲಿಸಿದ್ದರು. 

ADVERTISEMENT

ನಾಮಪತ್ರ ಪರಿಶೀಲಿಸಿದ ತಹಶೀಲ್ದಾರ್ ಮಂಗಳಾ ಎಂ, ಜ್ಯೋತಿ ಆಲೂರ, ವಂದನಾ ಭಟ್ಟಡ ನಾಮಪತ್ರ ತಿರಸ್ಕರಿಸಿದ್ದರಿಂದ, ಜ್ಯೋತಿ ಗೋವಿನಕೊಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಹುದ್ದೆ ಮೀಸಲಾಗಿದ್ದು, ಎಸ್‌ಸಿ ಕ್ಷೇತ್ರದಿಂದ ಗೆದ್ದಿದ್ದ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದರು. ಅವರೂ ನಾಮಪತ್ರ ಸಲ್ಲಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.