ADVERTISEMENT

ಮಹಾಲಿಂಗಪುರ |ಸಿಬಿಎಸ್‍ಇ: ಸಮೀರವಾಡಿ ಶಾಲೆ ಫಲಿತಾಂಶ ಶೇ 100

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:27 IST
Last Updated 13 ಮೇ 2025, 15:27 IST
ಯಜ್ಞಾ ಉಂದ್ರಿ
ಯಜ್ಞಾ ಉಂದ್ರಿ   

ಮಹಾಲಿಂಗಪುರ: ಸಮೀಪದ ಸಮೀರವಾಡಿ ಕೆ.ಜೆ.ಸೊಮೈಯಾ ಇಂಗ್ಲಿಷ್‌ ಮಾಧ್ಯಮ ಶಾಲೆಯ 10ನೇ ತರಗತಿಯ ಸಿಬಿಎಸ್‍ಇ ಫಲಿತಾಂಶ ಶೇ 100 ರಷ್ಟಾಗಿದೆ.

ಪರೀಕ್ಷೆಗೆ ಕುಳಿತ 52 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ. ಯಜ್ಞಾ ಉಂದ್ರಿ ಶೇ 95.6 (ಪ್ರಥಮ), ಪ್ರಭಾವತಿ ಹುದ್ದಾರ ಶೇ 93.2 (ದ್ವಿತೀಯ) ಹಾಗೂ ಸಿದ್ಧಾರ್ಥ ಪೇಟಿಮನಿ ಶೇ 92.8 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ. ಸುಪ್ರೀತ್‌ಗೌಡ ಬಿರಾದಾರ ಶೇ 92.6, ಆಕಾಂಕ್ಷಾ ಮೋಹಿತೆ ಶೇ 91, ಶ್ರಾವಣಿ ಉಳ್ಳಾಗಡ್ಡಿ ಶೇ 91 ರಷ್ಟು ಉತ್ತಮ ಅಂಕ ಪಡೆದಿದ್ದಾರೆ ಎಂದು ಪ್ರಾಚಾರ್ಯ ಸಿ.ಅನಿಲಕುಮಾರ ತಿಳಿಸಿದ್ದಾರೆ.

ಪ್ರಭಾವತಿ ಹುದ್ದಾರ
ಸಿದ್ಧಾರ್ಥ ಪೇಟಿಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT