ADVERTISEMENT

ಕೆರೂರ: ಪೊಲೀಸರಿಂದ ಅಣಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:02 IST
Last Updated 4 ಜುಲೈ 2025, 13:02 IST
ಕೆರೂರ ಪಟ್ಟಣದಲ್ಲಿ ಗಲಾಟೆ ನಡೆದಾಗ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಕುರಿತು ಪೋಲೀಸರಿಂದ ಅಣುಕು ಪ್ರದರ್ಶನ ನಡೆಯಿತು.
ಕೆರೂರ ಪಟ್ಟಣದಲ್ಲಿ ಗಲಾಟೆ ನಡೆದಾಗ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಕುರಿತು ಪೋಲೀಸರಿಂದ ಅಣುಕು ಪ್ರದರ್ಶನ ನಡೆಯಿತು.   

ಕೆರೂರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅವಘಡ ನಡೆದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪಟ್ಟಣದಲ್ಲಿ ಗುರುವಾರ ಪೊಲೀಸ್‌ ಸಿಬ್ಬಂದಿಯಿಂದ ಅಣಕು ಪ್ರದರ್ಶನ ನಡೆಯಿತು.

ಸುರಕ್ಷತಾ ಕ್ರಮ, ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸುವದು ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು.

ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾತನಾಡಿ, ಗಲಾಟೆಗಳು ನಡೆದಾಗ ಸ್ಥಳೀಯರು ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಗಲಾಟೆ ನಿಯಂತ್ರಿಸಲು  ಸಹಾಯವಾಗುತ್ತದೆ. ಗಲಾಟೆಯಲ್ಲಿ ಜೀವ ಹೋಗುವುದನ್ನು ತಪ್ಪಿಸಲು ನಮ್ಮ ಸಿಬ್ಬಂದಿ ಸುರಕ್ಷತಾ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ADVERTISEMENT

ಅಣುಕ ಪ್ರದರ್ಶನವನ್ನು ವೀಕ್ಷಿಸಿದ ಸಾರ್ವಜನಿಕರು ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದರು. ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ಐ ಭೀಮಪ್ಪ ರಬಕವಿ, ಕ್ರೈಮ್‌ ಪಿಎಸ್ಐ ಐ.ಎಂ.ಹಿರೇಗೌಡ್ರ, ಎಎಸ್ಐ ಎಂ.ಎ.ಘಂಟಿ, ಸಿಬ್ಬಂದಿ ಸಿದ್ದು ದಳವಾಯಿ, ರಮೇಶ ಸಮಗಾರ, ಮಲ್ಲು ಕೇಸರಪೆಂಟಿ, ಪ್ರವೀಣ ಘಾಟಗೆ, ಹನಮಂತ ಯಡಬಡಗಿ ಮುಂತಾದವರು ಇದ್ದರು.

ಕೆರೂರ ಪಟ್ಟಣದಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.