
ಕುಳಗೇರಿ ಕ್ರಾಸ್: ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪಿ.ಸಿ.ಗದ್ದಿಗೌಡರ ಅವರು ಪ್ರತಿ ಸ್ಪರ್ಧಿ ಸಂಯುಕ್ತಾ ಪಾಟೀಲ ಅವರನ್ನು 68,399 ಮತಗಳ ಅಂತರದಿಂದ ಪರಾಭವಗೊಳಿಸಿ ಐದನೆ ಭಾರಿಗೆ ದಾಖಲೆಯ ಜಯಗಳಿಸುತ್ತಿದ್ದಂತೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಮೀಪದ ಖಾನಾಪುರ ಎಸ್.ಕೆ ಗ್ರಾಮದ ದುರ್ಗಾ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿ ಸಂಭ್ರಮಿಸಿದರು.
ಖಾನಾಪುರ ಎಸ್.ಕೆ ಗ್ರಾಮದಿಂದ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಮೆರವಣಿಗೆಯು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಮುಖಾಂತರ ನೀರಾವರಿ ಇಲಾಖೆಯ ಮಾರುತೇಶ್ವರ ದೇವಸ್ಥಾನವನ್ನು ತಲುಪಿ ಪೂಜೆ ಸಲ್ಲಿಸಿ ಬಿಜೆಪಿ ಬಾವುಟ ಹಿಡಿದು ವಿವಿಧ ವಾದ್ಯಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ತುಳಸಿಗೇರಿ ಲೋಕಾಪೂರ,ಚುರ್ಚಪ್ಪ ಜಾಡರ, ಭೀಮಪ್ಪ ಚಿಂಚಖಂಡಿ, ಸುರೇಶ ಹೆರಕಲ್, ಸುರೇಶ ಲೋಕಾಪೂರ, ಹನುಮಂತ ಪೂಜಾರ, ಸುರೇಶ ಬಡಕಪ್ಪನವರ, ಸುನೀಲ ಲೋಕಾಪುರ, ಶ್ರೀನಿವಾಸ ಹಳ್ಳಿ, ಬಸವರಾಜ ಗೌಡರ, ಶಂಕ್ರಪ್ಪ ಬಡಕಪ್ಪನವರ, ಮಳಿಯಪ್ಪ ತಿಮ್ಮಾಪೂರ, ಭೀಮನಾಯ್ಕ ಹೊರಗಲಮನಿ, ಸಿಂಧುರ ಲೋಕಾಪುರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.