ಮಹಾಲಿಂಗಪುರ: ಪಟ್ಟಣದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ವಾರದ ಸಂತೆ ಅಸ್ತವ್ಯಸ್ತಗೊಂಡಿತು.
ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಧ್ಯವರ್ತಿಯಾಗಿರುವ ಪಟ್ಟಣದ ವಾರದ ಸಂತೆಗೆ ನೂರಾರು ಜನರು ಆಗಮಿಸುತ್ತಾರೆ. ಮಧ್ಯಾಹ್ನ ಬಿಸಿಲಿನ ಕಾರಣದಿಂದ ಹೆಚ್ಚಿನ ಜನಸಂದಣಿ ಇರಲಿಲ್ಲ. ಸಂಜೆಯಾಗುತ್ತಿದ್ದಂತೆ ಹೆಚ್ಚಿನ ಜನರು ಸಂತೆಗೆ ಆಗಮಿಸಿದ್ದರು.
ಆದರೆ, ಸಂಜೆ 5.30ಕ್ಕೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಿತು. ವ್ಯಾಪಾರಸ್ಥರು ಪರದಾಡಿದರು. ತರಕಾರಿ ಮಾರಾಟಗಾರರು ಮಳೆಯಿಂದ ತರಕಾರಿ ರಕ್ಷಿಸಿಕೊಳ್ಳಲು ಬವಣೆ ಪಟ್ಟರು. ಕೆಲವರು ಪ್ಲಾಸ್ಟಿಕ್ ಹೊದಿಸಿ ಸೊಪ್ಪುಗಳನ್ನು ಜೋಪಾನ ಮಾಡಿದರು. ವ್ಯಾಪಾರಸ್ಥರು ಹಾಕಿದ ಶೆಡ್‍ಗಳಲ್ಲಿ ನಿಂತು ಜನರು ಮಳೆಯಿಂದ ರಕ್ಷಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.