ADVERTISEMENT

ತೇರದಾಳ | ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: 145 ಮಕ್ಕಳು ಹಾಜರು

​ಪ್ರಜಾವಾಣಿ ವಾರ್ತೆ
Published 27 ಮೇ 2025, 14:26 IST
Last Updated 27 ಮೇ 2025, 14:26 IST
ತೇರದಾಳದ ಸಿದ್ಧೇಶ್ವರ ಶಾಲೆಯಲ್ಲಿ ಎಸ್ಎಸ್ಎಲ್ಸಿ-2 ಪರೀಕ್ಷೆ ಶಿಸ್ತು-ಶಾಂತಿಯಿಂದ ಪ್ರಾರಂಭಗೊಂಡವು.
ತೇರದಾಳದ ಸಿದ್ಧೇಶ್ವರ ಶಾಲೆಯಲ್ಲಿ ಎಸ್ಎಸ್ಎಲ್ಸಿ-2 ಪರೀಕ್ಷೆ ಶಿಸ್ತು-ಶಾಂತಿಯಿಂದ ಪ್ರಾರಂಭಗೊಂಡವು.   

ತೇರದಾಳ: ಎಸ್ಎಸ್ಎಲ್‌ಸಿ-2 ಪರೀಕ್ಷೆಗಳು ಸೋಮವಾರ ಪ್ರಾರಂಭಗೊಂಡಿದ್ದು, ಪಟ್ಟಣದ ಸಿದ್ಧೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 22 ಪ್ರೌಢಶಾಲೆಗಳ 308 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಅವರಲ್ಲಿ ಪ್ರಥಮ ಭಾಷೆಯ ಸೋಮವಾರದ ಪರೀಕ್ಷೆಗೆ 179 ವಿದ್ಯಾರ್ಥಿಗಳಿಗಾಗಿ ಒಟ್ಟು 8 ಕೊಠಡಿಗಳಲ್ಲಿ ಆಸನ ವ್ಯವಸ್ಥೆಯಾಗಿತ್ತು. ಅವರಲ್ಲಿ ಒಟ್ಟು 34 ಗೈರು ಹಾಜರಾಗಿದ್ದರು. ಒಟ್ಟು 8 ಪರೀಕ್ಷಾ ಕೊಠಡಿಗಳಲ್ಲಿ 145 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಮುಖ್ಯ ಅಧೀಕ್ಷಕ ಬಿ.ಬಿ.ಕುದರಿಮನಿ ತಿಳಿಸಿದರು.

ಪ್ರಶ್ನೆ ಪತ್ರಿಕೆ ಪಾಲಕರಾಗಿ ಎಸ್.ಆರ್.ಹುಕ್ಕೇರಿ, ನಂದಕುಮಾರ ಶೇಡಶ್ಯಾಳ ಸ್ಥಾನಿಕ ಜಾಗೃತದಳ ಅಧಿಕಾರಿ ಹಾಗೂ ಮಾರ್ಗಾಧಿಕಾರಿಯಾಗಿ ಹಾಗೂ ಮೊಬೈಲ್ ಸ್ವಾಧೀನ ಅಧಿಕಾರಿಯಾಗಿ ಎ.ಆರ್.ಮುಧೋಳ ಕಾರ್ಯನಿರ್ವಹಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಸಂಗಮೇಶ ವಿಜಯಪುರ ಸೇರಿದಂತೆ ಅಧಿಕಾರಿಗಳು ಅವಿಭಜಿತ ಜಮಖಂಡಿ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಸೋಮವಾರದ ಎಸ್ಎಸ್ಎಲ್‌ಸಿ ಪೂರಕ ಪ್ರಥಮ ಭಾಷಾ ಪರೀಕ್ಷೆಗೆ ತಾಲ್ಲೂಕಿನಲ್ಲಿ ಒಟ್ಟು 116 ಪ್ರೌಢಶಾಲೆಗಳಿಂದ ಒಟ್ಟು 1433 ವಿದ್ಯಾರ್ಥಿಗಳು ನಿಯೋಜನೆಯಾಗಿದ್ದಾರೆ. ಒಟ್ಟು 261 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಆಗಿರುವುದರಿಂದ 1172 ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ತೇರದಾಳದ ಸಿದ್ಧೇಶ್ವರ, ರಬಕವಿ-ಬನಹಟ್ಟಿಯಲ್ಲಿ 3 ಕೇಂದ್ರಗಳು, ಜಮಖಂಡಿಯಲ್ಲಿ 3 ಹಾಗೂ ಸಾವಳಗಿಯಲ್ಲಿ ಒಂದು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಸೂಕ್ತ ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲ ಕೇಂದ್ರಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದವರು ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ತಾಲ್ಲೂಕಿನಾದ್ಯಂತ ಯಾವುದೇ ನಕಲು ಮಾಡುವುದು ಸೇರಿದಂತೆ ಅಹಿತಕರ ಘಟನೆ ನಡೆದಿಲ್ಲ. ಶಿಸ್ತು-ಶಾಂತಿಯಿಂದ ಪರೀಕ್ಷೆ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.