ಬಾಗಲಕೋಟೆ: ಕಾಶ್ಮೀರದ ಪಹಲ್ಗಾಮ್ ದಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ ಖಂಡಿಸಿ ಬಾಗಲಕೋಟೆಯಲ್ಲಿ ಬುಧವಾರ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಯಿತು.
ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಿಜೆಪಿ ಉ್ರಗವಾಗಿ ಖಂಡಿಸುತ್ತದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಬಸವೇಶ್ವರ ವೃತ್ತದಲ್ಲಿ ಬುಧವಾರ ಸಂಜೆ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಶೃದ್ಧಾಂಜಲಿ ಸಭೆಯಲ್ಲಿ ಮೇಣದ ದೀಪ ಬೆಳಗಿ ನಮನ ಸಲ್ಲಿಸಲಾಯಿತು.
ಮೂಲಭೂತವಾದಿ ಉಗ್ರರನ್ನು ಬುಡ ಸಮೇತ ನಾಶ ಮಾಡಬೇಕು. ಇಂತಹ ಘಟನೆಗಳಿಗೆ ಭಾರತ ಬಗ್ಗುವುದಿಲ್ಲ. ಪ್ರಧಾನಮಂತ್ರಿ ಮೋದಿ ಅವರು ಸಮರ್ಥವಾಗಿ ಉತ್ತರ ನೀಡಲಿದ್ದಾರೆ ಎಂದರು.
ಸಿ.ವಿ.ಕೋಟಿ. ರಾಜು ರೇವಣಕರ, ಲಕ್ಷ್ಮೀನಾರಾಯಣ ಕಾಸಟ, ರಾಜು ನಾಯ್ಕರ, ಭಾಗೀರಥಿ ಪಾಟೀಲ, ಸವಿತಾ ಲೆಂಕೆಣ್ಣವರ, ಸರಸ್ವತಿ ಕುರಬರ, ಬಸವರಾಜ ಯಂಕಂಚಿ, ಗುಂಡುರಾವ್ ಶಿಂಧೆ, ಶಿವಾನಂದ ಟವಳಿ, ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಮತ್ತಿತರರು ಇದ್ದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಕಚೇರಿಯಿಂದ ಬವೇಶ್ವರ ವೃತ್ತದವರೆಗೆ ಪ್ರತಿಭಟನೆ ಮಾಡಲಾಯಿತು.
ಪಿ.ಎಚ್. ಪೂಜಾರ, ಸಂಗನಗೌಡ ಗೌಡರ, ಡಾ. ಶೇಖರ ಮಾನೆ, ವಿರುಪಾಕ್ಷ ಅಮೃತಕರ, ಯಲ್ಲಪ್ಪ ಅಂಬಿಗೇರ, ಸಂಜು ಡಿಗ್ಗಿ, ಮಲ್ಲಿಕಾರ್ಜುನ ಸುರಪುರ, ಶೈಲು ಅಂಗಡಿ, ರಾಜು ಗೌಳಿ, ಕಳಕಪ್ಪ ಬಾದವಾಡಗಿ ಮತ್ತಿತರರು ಇದ್ದರು.
ಕಾಂಗ್ರೆಸ್ ವತಿಯಿಂದಲೂ ಬಸವೇಶ್ವರ ವೃತ್ತದಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಉಗ್ರರ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುಪ್ತಚರ ಇಲಾಖೆ ಯಾಕೆ ವಿಫಲವಾಗುತ್ತಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ತಕ್ಷಣವೇ ಭದ್ರತಾ ಕ್ರಮಗಳನ್ನು ಬಲಪಡಿಸಬೇಕು. ಉಗ್ರರ ನೆಲೆಗಳನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಷ ಹದ್ಲಿ ಆಗ್ರಹಿಸಿದರು.
ಚಂದ್ರಶೇಖರ ರಾಠೋಡ, ರಮೇಶ ಬದ್ನೂರ, ಎಸ್.ಎನ್. ರಾಂಪುರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.