ಮುಧೋಳ: ಶ್ರೀಗಂಧ ಮರ ಕಡಿದು ಗಂಧದ ತುಂಡುಗಳನ್ನು ಕಳ್ಳತನ ಮಾಡಲೆತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಮಂಗಳವಾರ ಪಡೆದಿದ್ದಾರೆ.
ಬಂಧಿತರನ್ನು ಅಣ್ಣಿಗೇರಿ ಮೂಲದ ರಾಘವೇಂದ್ರ ಹರಣಶಿಕಾರಿ ಹಾಗೂ ನಾರಾಯಣ ಹರಣಶಿಕಾರಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 107 ಕೆ.ಜಿ. ಶ್ರೀಗಂಧದ ತುಂಡನ್ನು ವಶಕ್ಕೆ ಪಡೆಯಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮೃತ ಗಂಡೋಸಿ ಅವರ ಮಾರ್ಗದರ್ಶನದಲ್ಲಿ ನಡೆದ ಬಂಧಿತ ಕಾರ್ಯಚರಣೆ ತಂಡದಲ್ಲಿ ವಲಯ ಅರಣ್ಯಾಧಿಕಾರಿ ಶಿವಪುತ್ರ ತಳವಾರ, ಉಪವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ಡ ಅರಣ್ಯ ಪಾಲಕರಾದ ಚಂದ್ರಶೇಖರ, ಆನಂದ ಸಾಗರ, ಆನಂದ ಹವಳ್ಯಾಗೋಳ ಹಾಗೂ ಅರಣ್ಯ ಇಲಾಳೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.