ADVERTISEMENT

ಪದವೀಧರರ ಕ್ಷೇತ್ರ ಶೇ 66.37, ಶಿಕ್ಷಕರ ಕ್ಷೇತ್ರ ಶೇ 83.65ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 15:16 IST
Last Updated 13 ಜೂನ್ 2022, 15:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ವಿಧಾನ ಪರಿಷತ್‌ನ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 83.65ರಷ್ಟು ಹಾಗೂ ಪದವೀಧರರ ಕ್ಷೇತ್ರದಲ್ಲಿ ಶೇ 66.37 ರಷ್ಟು ಮತದಾನವಾಗಿದೆ.

ಶಿಕ್ಷಕರ ಕ್ಷೇತ್ರದಲ್ಲಿದ್ದ 5173 ಮತಗಳ ಪೈಕಿ 4,327 ಮತದಾರರು ಮತ ಚಲಾಯಿದ್ದಾರೆ. ಅದರಲ್ಲಿ 3,164 ಪುರುಷರು, 1,163 ಮಹಿಳೆಯರು ಮತ ಹಾಕಿದ್ದಾರೆ. ಅದೇ ರೀತಿ ಪದವೀಧರರ ಕ್ಷೇತ್ರದಲ್ಲಿನ 33,651 ಮತಗಳ ಪೈಕಿ 22,333 ಮತದಾರರು ಮತ ಚಲಾಯಿಸಿದ್ದಾರೆ. ಅದರಲ್ಲಿ 16,707 ಪುರುಷರು, 5,626 ಮಹಿಳೆಯರು ಮತದಾನ ಮಾಡಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, ಜಿಲ್ಲೆಯವರಾದ ಪಕ್ಷೇತರ ಅಭ್ಯರ್ಥಿಗಳಾದ ಅಭ್ಯರ್ಥಿ ಎನ್‌.ಬಿ. ಬನ್ನೂರ, ಶ್ರೀನಿವಾಸಗೌಡ ಗೌಡರ ಅವರ ಸ್ಪರ್ಧೆಯಿಂದ ಮತದಾನದ ಪ್ರಮಾಣ ಹೆಚ್ಚಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.