ADVERTISEMENT

ವಿನಯ್‌ ಈಗ ಪಾಲುದಾರರಲ್ಲ: ಸಾಲಿಯಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:20 IST
Last Updated 14 ಏಪ್ರಿಲ್ 2025, 14:20 IST

ಬಾಗಲಕೋಟೆ: ‘ರಾಯಬಾಗ ತಾಲ್ಲೂಕಿನ ಕುಡಚಿಯ ರತ್ನಾ ಎಂಟರ್‌ಪ್ರೈಸಸ್‌ನಲ್ಲಿ ಸಚಿವ ಆರ್‌.ಬಿ. ತಿಮ್ಮಾಪುರ ಅವರ ಪುತ್ರ ವಿನಯ್‌ ತಿಮ್ಮಾಪುರ ಈಗ ಪಾಲುದಾರರಾಗಿಲ್ಲ’ ಎಂದು ರತ್ನಾ ಎಂಟರ್‌ಪ್ರೈಸಸ್‌ನ ಸುಧಾಕರ ಸಾಲಿಯಾನ, ರಂಜಿತ್‌ಕುಮಾರ್ ಶೆಟ್ಟಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಡ್ಜ್‌ ಆ್ಯಂಡ್‌ ರೆಸ್ಟೋರೆಂಟ್ ಇದ್ದಾಗ ವಿನಯ್‌ ತಿಮ್ಮಾಪುರ ಶೇ23ರಷ್ಟು ಪಾಲುದಾರರಾಗಿದ್ದರು. ಬಾರ್ ಆ್ಯಂಡ್‌ ರೆಸ್ಟೋರೆಂಟ್‌ ಮಾಡಲಾಗುವುದು ಎಂದು ಹೇಳಿದ ಮೇಲೆ ಅವರು ಪಾಲುದಾರಿಕೆಯಿಂದ ಹಿಂದೆ ಸರಿದರು. ಅವರ ಜಾಗಕ್ಕೆ ಬೇರೆಯವರನ್ನು ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಸ್ಥಳಾಂತರಿಸಲಾಗಿದೆ. ಜನ ವಸತಿ ಪ್ರದೇಶ ಎಂದು ಅನಾವಶ್ಯಕವಾಗಿ ಅನುಮತಿ ನೀಡಲು ವಿಳಂಬ ಮಾಡಲಾಗುತ್ತಿದೆ. ಆರು ವರ್ಷಗಳಿಂದ ಅಲ್ಲಿ ಬೇರೆ ಯಾವುದೇ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಅನುಮತಿ ನೀಡಿಲ್ಲ. ಇಲಾಖೆ ಕೇಳಿದ ಎಲ್ಲ ದಾಖಲೆಗಳನ್ನು ನೀಡಲಾಗಿದೆ’ ಎಂದರು.

ADVERTISEMENT

‘ವಿನಯ್‌ ಹಾಗೂ ನಾನು ಯಾವುದೇ ಹೂಡಿಕೆ ಮಾಡಿಲ್ಲ. ರೆಸ್ಟೋರೆಂಟ್‌ ನಡೆಸಿಕೊಂಡು ಹೋಗುವುದಾಗಿ ಹೇಳಿದ್ದರಿಂದ ಪಾಲುದಾರಿಕೆ ನೀಡಲಾಗಿತ್ತು’ ಎಂದು ರಂಜಿತ್‌ಕುಮಾರ್ ಶೆಟ್ಟಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.