ಬಾಗಲಕೋಟೆ: ಅಂಗನವಾಡಿ ಫಲಾನುಭವಿಗಳಿಗೆ ಆಹಾರ ನಿಡಲು ಕಡ್ಡಾಯವಾಗಿ ಪೇಸ್ ಕ್ಯಾಪ್ಚರ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಜಾರಿಗೂಳಿಸಿದ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರಗೆ ಶನಿವಾರರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಬಾಣಂತಿ, ಮಕ್ಕಳಿಗೆ ಸೌಲಭ್ಯ ನಿಡಲು ಅವರ ಫೇಸ್ ಕ್ಯಾಪ್ಚರ್ ಮಾಡುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆ, ಇಲಾಖೆಯ ಪೋನ್ ನಲ್ಲಿ ಎಂಟ್ರಿ ಆಗದಿರುವುದು, ಫಲಾನುಭವಿಗಳು ಸರಿಯಾಗಿ ಒಟಿಪಿ ಹೇಳದಿರುವುದು, ಬಹುತೇಕ ಜನ ಫಲಾನುಭವಿಗಳು ಬಡವರಾಗಿರುವುದರಿಂದ ಫೋನ್ ರಿಚಾರ್ಜ್ ಮಾಡಿಸಿರುವುದಿಲ್ಲ ಎಂದು ತಿಳಿಸಿದರು.
ಫಲಾನುಭವಿ ಪೋನ್‌ಗೆ ಒಟಿಪಿ ಹೋಗುವುದಿಲ್ಲ. ನಂಬರ್ ಬದಲಾವಣೆ ಮಾಡಿರುತ್ತಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ಹೂಗಿ ಪೇಸ್ ಕ್ಯಾಪ್ಚರ್ ಮಾಡುವಲ್ಲಿ ಈ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕೆಲಸದಿಂದ ಅಂಗನವಾಡಿ ಕೇಂದ್ರದಲ್ಲಿ ಶಾಲಾಪೂರ್ವ ಶಿಕ್ಷಣ ಮಕ್ಕಳಿಗೆ ಕಲಿಸುವುದು ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕೇಂದ್ರದ ಸಚಿವರು ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಕೋರಲಾಯಿತು.
ಮನವಿ ಪತ್ರ ಸ್ವಿಕರಿಸಿದ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಕಮಲಾಬಾಯಿ ತೇಲಿ ಉಪಾದ್ಯಕ್ಷೆ ಕಸ್ತೂರಿ ಅಂಗಡಿ, ಮಂಜುಳಾ ನಾಯಕ, ಅಕ್ಕಮ್ಮ ಚಿತ್ತರಗಿ, ಹೇಮಾ ಪುರಾಣಿಕಮಠ, ಲಲಿತಾ ಮುಧೋಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.