ರಬಕವಿ ಬನಹಟ್ಟಿ: ‘ಪ್ರಜಾಸೌಧ ನಿರ್ಮಾಣಕ್ಕೆ ಪರಸ್ಪರ ಸಹಕಾರ ಮುಖ್ಯ. ಜಾಗ ಗುರುತಿಸುವುದು ಸರ್ಕಾರಕ್ಕೆ ಬಿಟ್ಟ ವಿವೇಚನೆಯಾಗಿದೆ. ಆದರೆ ನಮ್ಮ ಮಧ್ಯ ದ್ವೇಷ ಬೇಡ‘ ಎಂದು ನಗರದ ಹಿರಿಯರಾದ ಸಂಗಪ್ಪ ಕುಂದಗೋಳ ಹೇಳಿದರು.
ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶನಿವಾರ ಪ್ರಜಾಸೌಧ ನಿರ್ಮಾಣ ಕುರಿತು ನಡೆದ ಸ್ಥಳೀಯ ನಾಗರಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ರವಿ ಜಮಖಂಡಿ ಮಾತನಾಡಿ, ‘2021-22 ರಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರವೇ ನಿರ್ಧಾರ ಮಾಡಿದೆ. ಅದರಂತೆ ಪ್ರಗತಿಯೂ ನಡೆದಿದೆ. ಈಗ ಬನಹಟ್ಟಿಯ ನಾಗರಿಕರು ಹೊಸ ಸ್ಥಳ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದರು.
ಮುಖಂಡ ಧರೆಪ್ಪ ಉಳ್ಳಾಗಡ್ಡಿ ಮಾತನಾಡಿ, ‘ಪ್ರಜಾಸೌಧ ನಿರ್ಮಾಣಕ್ಕೆ ಸಹಕರಿಸಿ’ ಎಂದು ತಿಳಿಸಿದರು.
‘ಪ್ರಜಾಸೌಧ ನಿರ್ಮಾಣಕ್ಕಾಗಿ ಒಂದು ದಿನ ಸಾಂಕೇತಿಕವಾಗಿ ಬಂದ್ ಆಚರಣೆ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ರಾಮಣ್ಣ ಹುಲಕುಂದ ತಿಳಿಸಿದರು.
ಶಿವಾನಂದ ಬಾಗಲಕೋಟಮಠ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಜಾಸೌಧ ನಿರ್ಮಾಣ ಸಮಿತಿ ರಚನೆ ಮಾಡಲಾಗಿದ್ದು, ಮಾರುತಿ ನಾಯಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ನಾಯಕ ಹಾಗೂ 21 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶ್ರೀಶೈಲ ದಲಾಲ, ಬಸವರಾಜ ತೆಗ್ಗಿ, ಮಹಾದೇವ ದೂಪದಾಳ, ಸತೀಷ ಹಜಾರೆ, ಮಹಾದೇವ ಕೋಟ್ಯಾಳ, ಅನ್ನಪ್ಪ ಸುರಂಗಿ, ಭೀಮಸಿ ಪಾಟೀಲ, ಸಂಜು ಜೋತಾವರ, ಡಾ.ಬಸವರಾಜ ಡಂಗಿ, ರವಿ ಗಡಾದ, ಜಿ.ಎಸ್.ಅಮ್ಮಣಗಿಮಠ, ಚಿದಾನಂದ ಗಾಳಿ, ಶೇಖರ ಕೊಟ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.