ADVERTISEMENT

ಬಾಗಲಕೋಟೆ: ಬೀದಿ ನಾಯಿ ಕಚ್ಚಿ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:44 IST
Last Updated 14 ಜನವರಿ 2026, 15:44 IST
   

ಬಾಗಲಕೋಟೆ: ಬೀದಿ ನಾಯಿ ಕಚ್ಚಿ ಗಂಭೀರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕಿ ಅಲಿನಾ ಲೋಕಾಪುರ, ಬುಧವಾರ ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ನವನಗರದ ಸೆಕ್ಟರ್ ನಂಬರ್ 15ರಲ್ಲಿ ವಾಸವಿದ್ದ ಅಲಿನಾಗೆ ಡಿಸೆಂಬರ್ 29ರಂದು ಮನೆಯ ಎದುರೇ ಬೀದಿ ನಾಯಿ ಕಚ್ಚಿತ್ತು. ಕಣ್ಣು, ಮೂಗು ಮತ್ತು ಮುಖದ ಮೇಲೆ ಗಾಯಗಳಾಗಿದ್ದವು. ಆಕೆಗೆ ತಕ್ಷಣವೇ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಕುರಿ, ದನಗಳಿಗೆ ನಾಯಿಗಳು ಕಡಿದಾಗಲೇ ದೂರು ನೀಡಲಾಗಿತ್ತು. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಮಗಳ ಸಾವಿಗೇ ಅಧಿಕಾರಿಗಳೇ ಕಾರಣ’ ಎಂದು ಅಲಿನಾ ತಂದೆ ರಾಜಸಾಬ್ ಲೋಕಾಪುರ ದೂರಿದರು.

ADVERTISEMENT

‘ಬೀದಿ ನಾಯಿ ಕಚ್ಚಿ ಮೃತ ಬಾಲಕಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.