ರಬಕವಿ–ಬನಹಟ್ಟಿ: ಬನಹಟ್ಟಿ ನಗರದಲ್ಲಿ ನಿತ್ಯ ಸಂತೆ ನಡೆಯುವ ಸ್ಥಳ ಮಳೆಯಿಂದಾಗಿ ಕೆಸರಿನ ಗದ್ದೆಯಂತಾಗಿದೆ. ಸಮೀಪದ ಗ್ರಾಮಗಳಿಂದ ಬರುವ ತರಕಾರಿ ಮಾರಾಟಗಾರರು ಕೆಸರಿನಲ್ಲಿಯೇ ತರಕಾರಿ ಇಟ್ಟು ಮಾರಾಟ ಮಾಡುವಂತಾಗಿದೆ. ಇಲ್ಲಿಯ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಯಾವುದೇ ಮೂಲ ಸೌಕರ್ಯ ಇಲ್ಲ
ಮಳೆ ಬಂದರೆ ಇಲ್ಲಿಯ ಮಾರುಕಟ್ಟೆ ಕೆಸರು ಗದ್ದೆಯಾಗುತ್ತದೆ. ವ್ಯಾಪಾರಿಗಳು ಕೆಸರು ನೆಲದ ಮೇಲೆಯೇ ಬಟ್ಟೆ ಹಾಸಿ ತರಕಾರಿಗಳನ್ನು ಇಟ್ಟು ಮಾರಾಟ ಮಾಡುತ್ತಾರೆ. ಇದರಿಂದ ತರಕಾರಿಗಳೂ ಸ್ವಚ್ಛವಾಗಿರುವುದಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸುಸಜ್ಜಿತ ಸಂತೆ ಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ಈರಣ್ಣ ಜಿಗಜಿನ್ನಿ, ಮಲಕಪ್ಪ ಹಳಿಂಗಳಿ, ಕಿರಣ ಆಳಗಿ, ಪ್ರಕಾಶ ಹೋಳಗಿ, ಗೋಪಾಲ ಭಟ್ಟಡ, ಗಂಗಾಧರ ಕೊಕಟನೂರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.