ADVERTISEMENT

ರಬಕವಿ ಬನಹಟ್ಟಿ| ದಾಸೋಹಕ್ಕೆ ಹೆಸರಾದ ಬಂಡಿಗಣಿ ಮಠ: ಮುಖ್ಯಮಂತ್ರಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:14 IST
Last Updated 14 ಅಕ್ಟೋಬರ್ 2025, 3:14 IST
ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದಲ್ಲಿ ವಿಶ್ವ ಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದಲ್ಲಿ ವಿಶ್ವ ಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು   

ರಬಕವಿ ಬನಹಟ್ಟಿ: ‘ಬಂಡಿಗಣಿಯ ಮಠವು ದಾಸೋಹಕ್ಕಾಗಿ ಹೆಸರು ಮಾಡಿದೆ. ವರ್ಷದಲ್ಲಿ 282 ಕ್ಕೂ ಹೆಚ್ಚು ದಿನಗಳ ಕಾಲ ದಾಸೋಹ ಸೇವೆ ಮಾಡುತ್ತಿದೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ದಾಸೋಹ ಸೇವೆ ಮಾಡುತ್ತಿರುವುದು ಬಸವ ತತ್ವದ ಅನುಷ್ಠಾನವಾಗಿದೆ. ಇದು ಸ್ತುತ್ಯರ್ಹ ಕಾರ್ಯ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

15ಕ್ಕೂ ಹೆಚ್ಚು ಖಾದ್ಯಗಳು: ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಮಠದ ಆವರಣದಲ್ಲಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಮಾದಲಿ, ಹಾಲುಗ್ಗಿ, ಜಿಲೇಬಿ, ಹೋಳಿಗೆ, ಚಪಾತಿ, ಭಜಿ, ಮಸಾಲಾ ರೈಸ್, ಅನ್ನ, ಕುಸ್ಕಾ ರೈಸ್, ಹಾಲು, ತುಪ್ಪ ಸೇರಿದಂತೆ 15 ರೀತಿಯ ಖಾದ್ಯಗಳು ಇದ್ದವು. ಪ್ರಸಾದ ವಿತರಣೆ ಕಾರ್ಯವೂ ವ್ಯವಸ್ಥಿತವಾಗಿ ನಡೆಯಿತು. ಭಕ್ತರಿಗೆ ನಾಲ್ಕು ಟನ್ ಗೋವಿನ ಜೋಳದ ಕುದಿಸಿದ ತೆನೆಗಳನ್ನು ವಿತರಣೆ ಮಾಡುತ್ತಿರುವುದೂ ಗಮನ ಸೆಳೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.