ADVERTISEMENT

ಸುಡುಗಾಡು ಸಿದ್ಧರ ಕುಟುಂಬಗಳಿಗೆ ಶಾಶ್ವತ ಸೂರು: ಶಾಸಕ ಭೀಮಸೇನ ಚಿಮ್ಮನಕಟ್ಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:14 IST
Last Updated 14 ಅಕ್ಟೋಬರ್ 2025, 3:14 IST
ಕುಳಗೇರಿ ಕ್ರಾಸ್ ಗ್ರಾಮದ ಎಪಿಎಂಸಿ ಆವರಣದಲ್ಲಿ ಭಾನುವಾರ ಸುಡುಗಾಡು ಸಿದ್ದರ ಸಂಘವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಗಣ್ಯರು ಉದ್ಘಾಟಿಸಿದರು
ಕುಳಗೇರಿ ಕ್ರಾಸ್ ಗ್ರಾಮದ ಎಪಿಎಂಸಿ ಆವರಣದಲ್ಲಿ ಭಾನುವಾರ ಸುಡುಗಾಡು ಸಿದ್ದರ ಸಂಘವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಗಣ್ಯರು ಉದ್ಘಾಟಿಸಿದರು   

ಕುಳಗೇರಿ ಕ್ರಾಸ್‌: ‘ಹಲವು ವರ್ಷಗಳಿಂದ ಗ್ರಾಮದ ಎಪಿಎಂಸಿ ಆವರಣದಲ್ಲಿ ವಾಸಿಸುತ್ತಿರುವ ಬಹುತೇಕ ಸುಡುಗಾಡು ಸಿದ್ದರ ಕುಟುಂಬಗಳಿಗೆ ನನ್ನ ಅವಧಿಯಲ್ಲಿ ಶಾಶ್ವತವಾದ ಸೂರು ಕಲ್ಪಿಸುತ್ತೇನೆ. ಅವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲುತ್ತದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದರು.

ಗ್ರಾಮದ ಎಪಿಎಂಸಿ ಆವರಣದಲ್ಲಿ ಸುಡುಗಾಡು ಸಿದ್ದ ಸಮುದಾಯದ ಸಂಘವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸುಡುಗಾಡ ಸಿದ್ದರ 80ಕ್ಕೂ ಹೆಚ್ಚು ಕುಟುಂಬಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಇಂತಹ ಕುಟುಂಬಗಳು ಎಪಿಎಂಸಿ ಆವರಣದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಮಳೆ, ಚಳಿ ಹಾಗೂ ಬೀಸಿಲನ್ನು ಲೆಕ್ಕಿಸದೇ, ಜೀವನಕ್ಕಾಗಿ ವಿವಿಧ ಕುಲಕಸುಬು ಮಾಡುತ್ತಿದ್ದಾರೆ. ಈ ಕುಟುಂಬಗಳಿಗೆ ಶಾಶ್ವತ ಸೂರನ್ನು ಕಲ್ಪಿಸುವಂತೆ ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಪೋಷಕರು ಮಾಡಬೇಕು’ ಎಂದು ಹೇಳಿದರು.

ADVERTISEMENT

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಐ.ಎಸ್. ಕರಿಗೌಡ್ರ ಮಾತನಾಡಿದರು.

ಶಿವಲೋಹಿತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೀರಪ್ಪ ಶಾಸ್ತ್ರಿ, ಮುಖಂಡರಾದ ನಿಂಗಪ್ಪ ಕುರಿ, ಶ್ರೀಕಾಂತಗೌಡ ಗೌಡರ, ಪಿಕೆಪಿಎಸ್‌ ಅಧ್ಯಕ್ಷ ಶ್ರೀಕಾಂತ ಅಡಪಟ್ಟಿ, ಪಿಕೆಪಿಎಸ್‌ ನಿರ್ದೆಶಕ ಶಿವಾನಂದ ಚೋಳನ್ನವರ, ರಾಜ್ಯ ಸುಡಗಾಡು ಸಿದ್ದ ಸಂಘದ ಉಪಾಧ್ಯಕ್ಷ ಭೀಮಸಿ ಗಂಟಿ, ಸುಡಗಾಡು ಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಗಂಟಿ, ಸುಡಗಾಡು ಸಿದ್ದ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಎಲ್.‌ ಅಗಸ್ತದವರು, ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ಹಿರಗಣ್ಣವರ, ಸದಸ್ಯರಾದ ವೆಂಕಣ್ಣ ಹೊರಕೇರಿ, ಹನುಮಂತ ನರಗುಂದ, ಮಾರುತಿ ತಳವಾರ, ಶೇಖಪ್ಪ ಪವಾಡಿನಾಯ್ಕರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಕಟ್ಟಿಕಾರ, ಹನುಮಂತ ಚಿಕ್ಕೊಪ್ಪ, ಶ್ಯಾಮಲಾ ಮಾದರ, ವಿಠ್ಠಲ ದ್ಯಾವನಗೌಡ್ರ, ಮಹಾಂತೇಶ ಹುಲ್ಲಿಕೇರಿ, ಮಾರುತಿ ವಿಭೂತಿ ದುರಗಪ್ಪ ವಿಭೂತಿ, ಯಲ್ಲಪ್ಪ ಡೊಕ್ಕನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.