ADVERTISEMENT

‘ನಮ್ಮ ಪುಸ್ತಕ ನಿಮ್ಮ ಮನೆ’ಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 3:44 IST
Last Updated 17 ಅಕ್ಟೋಬರ್ 2021, 3:44 IST
ಗುಳೇದಗುಡ್ಡದಲ್ಲಿ ನಮ್ಮ ಪುಸ್ತಕ ನಿಮ್ಮ ಮನೆಗೆ ಅಭಿಯಾನ ನಡೆಯಿತು
ಗುಳೇದಗುಡ್ಡದಲ್ಲಿ ನಮ್ಮ ಪುಸ್ತಕ ನಿಮ್ಮ ಮನೆಗೆ ಅಭಿಯಾನ ನಡೆಯಿತು   

ಗುಳೇದಗುಡ್ಡ: ಪುಸ್ತಕ ಓದುವುದರಿಂದ ಮತ್ತು ಅದರ ಸಾಂಗತ್ಯದಿಂದ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿ, ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ ಎಂದು ಡಾ.ವಿ.ಎ.ಬೆನಕನಾಳ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಅಖಿಲ ಭಾರತ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾ ಘಟಕ, ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಕಲಾವಿದರ ಸಂಘ (ರಿ) ಬೆಂಗಳೂರು, ಮಕ್ಕಳ ಸಾಹಿತ್ಯ ಸಮಾಗಮ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳಿಗೆ ನಮ್ಮ ಪುಸ್ತಕ ನಿಮ್ಮ ಮನೆಗೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತಿ ಪಿ.ಯು. ಪಾಡಾ, ಪ್ರೊ.ವಿ.ಎ.ಢಾಣಕಶಿರೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಬಾಗಲಕೋಟೆ ಜಿಲ್ಲಾ ಆಡಳಿತದಿಂದ ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಇಲ್ಲಿನ ಹಿರಿಯ ವಿಶ್ರಾಂತ ಚಿತ್ರಕಲಾ ಶಿಕ್ಷಕ ಮಹಾದೇವ ಜಗತಾಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹದೇವ ಜಗತಾಪ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿ.ಕೆ.ತಳವಾರ ಅವರು ಆರಂಭಿಸಿದ ನಮ್ಮ ಪುಸ್ತಕ ನಿಮ್ಮ ಮನೆಗೆ ಅಭಿಯಾನ ಬಹಳ ಮಹತ್ವಪೂರ್ಣವಾಗಿದೆ ಎಂದು ಹೇಳಿದರು.

ADVERTISEMENT

ಅಭಿಯಾನದ ಸಂಚಾಲಕ ಜಿ.ಕೆ. ತಳವಾರ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಪುಸ್ತಕ ನೀಡಿದರು. ಎಸ್.ಎಸ್.ಜವಳಿ, ಕೆ.ಆರ್.ರಾಯಚೂರ, ಎಂ.ಓ.ಸುರಪೂರ, ಗಂಗಾಧರ ಕರನಂದಿ, ಎ.ಐ.ಅತ್ತಾರ, ಈರಪ್ಪ ಸಮಗಂಡಿ, ಶಿವಕುಮಾರ ಕರನಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.