ಸಾವು (ಪ್ರಾತಿನಿಧಿಕ ಚಿತ್ರ)
ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುವವರಿಂದ ಹಣ ವಸೂಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ.
ಅ.8 ರಂದು ಸಂಜೆ ಆಲಗೂರು ಗ್ರಾಮದ ನಿವಾಸಿ ಬಸವರಾಜ ಖಾನಗೊಂಡ ಮದರಖಂಡಿ ಗ್ರಾಮದ ಬಳಿ ದ್ವಿಚಕ್ರ ವಾಹನದಿಂದ ಬಿದ್ದು ಮೃತರಾಗಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರದ ತನಿಖೆಯಲ್ಲಿ ಕೊಲೆ ಎಂದು ಗೊತ್ತಾಗಿದೆ.
ಆರೋಪಿ ಅಶ್ಪಾಕ್ ಮುಲ್ಲಾ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾಡುತ್ತಿದ್ದನ್ನು ಬಯಲಿಗೆಳೆಯುವುದಾಗಿ ಬೆದರಿಸಿ ಪತ್ರಕರ್ತ ಬಸವರಾಜ, ಅಶ್ಪಾಕ್‌ನಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದರು. ಹೆಚ್ಚಿನ ಹಣಕ್ಕೆ ಬಸವರಾಜ ಬೇಡಿಕೆ ಇಟ್ಟಿದ್ದರಿಂದ ವೈಮನಸ್ಸು ಉಂಟಾಗಿತ್ತು.
ತೇರದಾಳ ಹೋಟೆಲ್‌ನಲ್ಲಿ ಸಂಧಾನದ ಮಾತುಕತೆ ನಡೆದಿತ್ತು. ಮಾತುಕತೆ ವಿಫಲವಾಗಿದ್ದರಿಂದ ಅಶ್ಫಾಕ್ ತನ್ನ ಸಹಚರರಾದ ನಂದೇಶ್ವರ, ಮಹೇಶಗೆ ಬಸವರಾಜ ಚಲನವಲನದ ಮೇಲೆ ಕಣ್ಣಿಡಲು ಹೇಳಿದ್ದನು.
‘ದ್ವಿಚಕ್ರ ವಾಹನದಲ್ಲಿ ಬಸವರಾಜ ಜಮಖಂಡಿ ತೆರಳುತ್ತಿರುವ ವಿಷಯ ತಿಳಿದ ಅಶ್ಪಾಕ್, ಮಿನಿ ಸರಕು ವಾಹನ ಡಿಕ್ಕಿ ಹೊಡೆಸಿ, ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಮೂವರೂ ಆರೋಪಿಗಳನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂದಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.