ADVERTISEMENT

ಬಿಎಸ್‌ವೈ ಮೇಲೆ ಸಿಟ್ಟು, ಸಂತ್ರಸ್ತರಿಗೆ ಬರೆ: ರೈತ ಚಾಮರಸ ಮಾಲಿ ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:30 IST
Last Updated 15 ಸೆಪ್ಟೆಂಬರ್ 2019, 19:30 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಪ್ರವಾಹ ಸಂತ್ರಸ್ತರ ಮಹಾಅಧಿವೇಶನದ ವೇಳೆ ಹುನಗುಂದ ತಾಲ್ಲೂಕಿನ ಕೋಡಿಹಾಳದ ಪರಮೇಶ ಜೋಳದ ಸಂತ್ರಸ್ತರ ಸ್ಥಿತಿಗತಿಯನ್ನು ಪ್ರಾತಿನಿಧಿಕವಾಗಿ ಬಿಂಬಿಸಿದ್ದು ಹೀಗೆ..
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಪ್ರವಾಹ ಸಂತ್ರಸ್ತರ ಮಹಾಅಧಿವೇಶನದ ವೇಳೆ ಹುನಗುಂದ ತಾಲ್ಲೂಕಿನ ಕೋಡಿಹಾಳದ ಪರಮೇಶ ಜೋಳದ ಸಂತ್ರಸ್ತರ ಸ್ಥಿತಿಗತಿಯನ್ನು ಪ್ರಾತಿನಿಧಿಕವಾಗಿ ಬಿಂಬಿಸಿದ್ದು ಹೀಗೆ..   

ಬಾಗಲಕೋಟೆ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಕೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಯಾವುದೇ ನೆರವಿಗ ಧಾವಿಸುತ್ತಿಲ್ಲ‘ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಆರೋಪಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನರೇಂದ್ರ ಮೋದಿ ಚಂದ್ರಯಾನ ವೀಕ್ಷಣೆಗೆ ಬೆಂಗಳೂರಿಗೆ ಬಂದರೂ, ಸಂತ್ರಸ್ತರ ಪರ ನೆರವು ಕೋರಲು ತಮ್ಮೊಡನೆ ಮಾತನಾಡಲು ಇಚ್ಛಿಸಿದ ಮುಖ್ಯಮಂತ್ರಿಗೆ ಭೇಟಿಗೆ ಅವಕಾಶ ನೀಡಲಿಲ್ಲ. ಯಡಿಯೂರಪ್ಪ ಮೇಲೆ ಕೋಪವಿದ್ದರೆ ಅವರನ್ನು ಕಿತ್ತು ಹಾಕಲಿ, ಅದನ್ನು ಸಂತ್ರಸ್ತರ ವಿರುದ್ಧ ತೀರಿಸಿಕೊಳ್ಳುವುದೇಕೆ ಎಂದು ಪ್ರಶ್ನಿಸಿದರು.

‘ಭೀಕರ ಪ್ರವಾಹಕ್ಕೆ ತುತ್ತಾಗಿ ತಿಂಗಳು ಕಳೆದರೂ ರಾಜ್ಯದ ನೆರವಿಗೆ ಬಾರದೇ ಕೇಂದ್ರ ಸರ್ಕಾರ ಜಾಣಮೌನ ವಹಿಸಿ, ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ‘ ಎಂದುಆಕ್ರೋಶ ವ್ಯಕ್ತಪಡಿಸಿದ ಚಾಮರಸ ಮಾಲಿಪಾಟೀಲ, ‘ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು‘ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.