ADVERTISEMENT

ಬಾಗಲಕೋಟೆ | ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 5:56 IST
Last Updated 11 ಡಿಸೆಂಬರ್ 2020, 5:56 IST
   

ಬಾಗಲಕೋಟೆ: ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಆರಂಭಿಸಿರುವ ಪರಿಣಾಮ ಜಿಲ್ಲೆಯಾದ್ಯಂತ ಶುಕ್ರವಾರ ಬಸ್‌ ಸಂಚಾರ ಸ್ಥಗಿತಗೊಂಡಿದೆ. ನೌಕರರ ಮುಷ್ಕರದ ಅರಿವಿಲ್ಲದೇ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಅಲ್ಲಿ ಬಸ್ಗಳು ಕಾಣದಿರುವುದು ಕಂಡು ಕಂಗಾಲಾದರು. ದೂರದ ಊರುಗಳಿಂದ ಬಂದ ಪ್ರಯಾಣಿಕರ ಪಾಡಂತೂ ಹೇಳತೀರದಾಗಿದೆ. ನೂರಾರು ಮಂದಿ ಮಕ್ಕಳು ಮರಿ ಸಮೇತ ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ನಸುಕಿನಲ್ಲಿ ಬಸ್ ಗಳನ್ನು ನಿಲ್ದಾಣಕ್ಕೆ ತಂದರೂ ಮುಷ್ಕರ ಖಚಿತವಾಗುತ್ತಿದ್ಸಂತೆಯೇ ಚಾಲಕರು ಒಯ್ದು ಡಿಪೊಗಳಲ್ಲಿ ಬಿಟ್ಟು ಬಂದರು. ಹೀಗಾಗಿ ಬಸ್ ಗಳು ಕಾಣದೇ ನಿಲ್ದಾಣ ಬಿಕೊ ಎನ್ನುತ್ತಿವೆ. ಬಾಗಲಕೋಟೆಯ ಎಂಟು ಡಿಪೊಗಳ ವ್ಯಾಪ್ತಿಯಲ್ಲೂ ಬಸ್ ಸಂಚಾರ ಸ್ಥಗಿತಗೊಂಡಿದೆ.

ಕಾರ್ತಿಕ ಮಾಸಕ್ಕೆ ಗುಡ್ಡಾಪುರದ ದಾನಮ್ಮನ ದರ್ಶನಕ್ಕೆ ಗೋವಾದ ಜುವಾರಿ ನಗರದಿಂದ ಕುಟುಂಬ ಸಮೇತ ಹೊರಟುಬಂದಿದ್ದೆವು. ಬಾಗಲಕೋಟೆಗೆ ಬಂದರೆ ಇಲ್ಲಿಂದ ಮುಂದೆ ಹೋಗಲು ಬಸ್ ಇಲ್ಲವಾಗಿದೆ ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿಯ ಲಕ್ಷ್ಮಣ ಯಡ್ರಾಮಿ ಅಳಲು ತೋಡಿಕೊಂಡರು.

ADVERTISEMENT

ಟಂಟಂ ಚಾಲಕರಿಗೆ ಸುಗ್ಗಿ: ಬಸ್ ಸಂಚಾರ ಸ್ಥಗಿತಗೊಂಡಿರುವುದು ಟಂಟಂ ಚಾಲಕರಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಬಾದಾಮಿ, ಗುಳೇದಗುಡ್ಡ, ಅಮೀನಗಡ, ಕಮತಗಿ, ಕಲಾದಗಿ ಕಡೆಗೆ ತೆರಳಲು ಪ್ರಯಾಣಿಕರು ಟಂಟಂಗಳನ್ನೇ ಆಶ್ರಯಿಸಿದರು. ಒಬ್ಬರಿಗೆ ₹100 ರಿಂದ 120 ಕೊಟ್ಟು ಪ್ರಯಾಣಿಕರು ಬಾದಾಮಿಗೆ ತೆರಳಿದ್ದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.