ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:52 IST
Last Updated 5 ನವೆಂಬರ್ 2025, 7:52 IST
ಬಾದಾಮಿಯಲ್ಲಿ ‘ಕನಕ ಪಂಚಮಿ ’ ಸಮಾರಂಭವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಡೊಳ್ಳುವಾದ್ಯ ನುಡಿಸಿ ಉದ್ಘಾಟಿಸಿದರು
ಬಾದಾಮಿಯಲ್ಲಿ ‘ಕನಕ ಪಂಚಮಿ ’ ಸಮಾರಂಭವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಡೊಳ್ಳುವಾದ್ಯ ನುಡಿಸಿ ಉದ್ಘಾಟಿಸಿದರು   

ಬಾದಾಮಿ: ‘ಶರಣರ ಸಂತರ ಮತ್ತು ಮಹಾತ್ಮರ ಚರಿತ್ರೆಯ ಉಪನ್ಯಾಸ ಕೇಳಿ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣವನ್ನು ಕೊಡಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಬೀರಲಿಂಗೇಶ್ವರ ದೇವಸ್ಥಾನ ಮತ್ತು ಕುರುಬರ ಸಮಾಜ ಹಿತವರ್ಧಕ ಸಂಘದಿಂದ ಸೋಮವಾರ ಬೀರಲಿಂಗೇಶ್ವರ ಸಭಾ ಭವನದಲ್ಲಿ ನಡೆದ ‘ ಕನಕ ಪಂಚಮಿ’ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಮಖಂಡಿಯ ಉಪನ್ಯಾಸಕ ಯಶವಂತ ಕೊಕ್ಕನವರ ಅವರು ಕನಕದಾಸರ ಬದುಕು, ಶಿಕ್ಷಣ ಮತ್ತು ಬರಹ ಕುರಿತು ಮಾತನಾಡಿ, ‘ಹುಟ್ಟು-ಸಾವಿನ ನಡುವಿನ ಜೀವನ ಸಾರ್ಥಕವಾಗಲು ಸಂತ ಮಹಾಂತರ ಜೀವನ ಚರಿತ್ರೆಯನ್ನು ಆಲಿಸಬೇಕು. ಅವರ ತತ್ವಗಳನ್ನು ಅರಿತುಕೊಂಡು ವ್ಯಕ್ತಿತ್ವವನ್ನು ರೂಪಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಕನಕದಾಸರ ಚರಿತ್ರೆಯನ್ನು ಎಲ್ಲರೂ ತಿಳಿಯಬೇಕು. ಭೀಮಸೇನ ಚಿಮ್ಮನಕಟ್ಟಿ ಮುಂಬರುವ ದಿನಗಳಲ್ಲಿ ಸಚಿವರಾಗುತ್ತಾರೆ’ ಎಂದು ಶಿರೂರಿನ ಕನಕ ಭ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಭವಿಷ್ಯ ನುಡಿದರು.

‘ನೂತನ ಕನಕ ಭವನ ನಿರ್ಮಾಣಕ್ಕೆ 10 ಗುಂಟೆ ನಿವೇಶನ ಗುರುತಿಸಲಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ₹10 ಲಕ್ಷ ಮಂಜೂರು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ನೂತನ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ’ ಎಂದು ಅಧ್ಯಕ್ಷತೆ ವಹಿಸಿದ್ದ ಬೀರಲಿಂಗೇಶ್ವರ ದೇವಸ್ಥಾನ ಮತ್ತು ಕುರುಬರ ಸಮಾಜ ಹಿತರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಹೊಸಮನಿ ಹೇಳಿದರು.

ವೈದ್ಯರು, ಪ್ರಾಧ್ಯಾಪಕರು, ಮಹಿಳೆಯರು, ಯುವಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಉಜ್ವಲ ಬಸರಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.