ADVERTISEMENT

ಶೀತಗಾಳಿ: ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯ–ಹವಾಮಾನ ಇಲಾ

ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:29 IST
Last Updated 19 ನವೆಂಬರ್ 2025, 2:29 IST
<div class="paragraphs"><p>ಶೀತಗಾಳಿ</p></div>

ಶೀತಗಾಳಿ

   

ಬಾಗಲಕೋಟೆ: ಜಿಲ್ಲೆಯಲ್ಲಿ ಮಂಗಳವಾರದಿಂದ ಶೀತಗಾಳಿ ಬೀಸಲಾರಂಭಿಸಿದ್ದು, ರಾತ್ರಿ ವೇಳೆ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನ.21 ರ ವರೆಗೆ ಶೀತಗಾಳಿ ಬೀಸಲಿದ್ದು, ಗಂಟೆಗೆ 10 ರಿಂದ 12 ಕಿ.ಮೀ. ವೇಗದಲ್ಲಿ ಗಾಳಿ ಇದೆ. ತಣ್ಣನೆ ಗಾಳಿಯಿಂದಾಗಿ ಚಳಿಯ ತೀವ್ರತೆ ಹೆಚ್ಚಾಗಿದೆ.

ADVERTISEMENT

ಜಿಲ್ಲೆಯಲ್ಲಿ ಕನಿಷ್ಠ ತಾಪಮಾನವು 14 ರಿಂದ 16 ಡಿಗ್ರಿ ಸೆಲ್ಸಿಸ್‌ನಷ್ಟಿರುತ್ತಿತ್ತು. ಅದು 4ರಿಂದ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಸೆಕೆಯ ಬೇಗೆಯಿಂದ ಬೆಂದಿದ್ದ ಜನರಿಗೆ ನಾಲ್ಕಾರು ದಿನಗಳಿಂದ ಚಳಿಯ ಅನುಭವವಾಗತೊಡಗಿದೆ. ಮುಂದಿನ ದಿನಗಳಲ್ಲಿ ಚಳಿಯ ತೀವ್ರತೆ ಹೆಚ್ಚಲಿದೆ.

‘ರಾತ್ರಿ ವೇಳೆ ಉಷ್ಣಾಂಶವು 10.6 ರಿಂದ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ವಾರದಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆಗಳಿವೆ’ ಎನ್ನುತ್ತಾರೆ ಬಾಗಲಕೋಟೆ ಕೆವಿಕೆ ಹವಾಮಾನ ತಜ್ಞ ಬಸವರಾಜ ನಾಗಲೀಕರ.

ಚಳಿ ಆರಂಭವಾಗಿರುವುದರಿಂದ ಜನರು ಸ್ಟೆಟರ್‌, ರಗ್ಗುಗಳ ಮೊರೆ ಹೋಗಿದ್ದಾರೆ. ರಾತ್ರಿ ಹಾಗೂ ಬೆಳಗಿನ ಜಾವ ಕಾರ್ಯ ನಿರ್ವಹಿಸುವವರು ರಸ್ತೆಗಳಲ್ಲಿ ಬೆಂಕಿ ಕಾಯಿಸುತ್ತಿದ್ದಾರೆ. ‌ಕಿವಿಗೆ ಕ್ಯಾಪ್‌ ಧರಿಸಿಕೊಂಡು ಸಂಚರಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.