ADVERTISEMENT

ಬಾಗಲಕೋಟೆ: ಸಹಕಾರಿ ಸಂಘಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:03 IST
Last Updated 21 ನವೆಂಬರ್ 2025, 8:03 IST
ಅಮೀನಗಡ ಪಟ್ಟಣದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಸಹಕಾರ ಧುರೀಣರು ಉದ್ಘಾಟಿಸಿದರು
ಅಮೀನಗಡ ಪಟ್ಟಣದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಸಹಕಾರ ಧುರೀಣರು ಉದ್ಘಾಟಿಸಿದರು   

ಅಮೀನಗಡ: ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರು, ವ್ಯಾಪಾರಸ್ಥರು ಸೇರಿದಂತೆ ಬಡ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ ಎಂದು ಸಹಕಾರಿ ಸಂಘಗಳ ಉಪ ನಿಬಂಧಕ ದಾನಯ್ಯ ಹಿರೇಮಠ ಹೇಳಿದರು.

ಗುರುವಾರ ಪಟ್ಟಣದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್, ಹುನಗುಂದ ಹಾಗೂ ಇಳಕಲ್ ಅವಳಿ ತಾಲ್ಲೂಕುಗಳ ಪಿಕೆಪಿಎಸ್ ಸಹಕಾರಿ ಸಂಘಗಳು ಹಾಗೂ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ವ್ಯಾಪಾರಸ್ಥರು, ನೇಕಾರರು ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರ್ಗದ ಜನತೆಗೆ ಬದುಕು ಕಟ್ಟಿಕೊಳ್ಳಲು ಆರ್ಥಿಕ ಸಹಾಯ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಯೂನಿಯನ್ ಮಂಡಳಿಯ ನೀಲಪ್ಪ ತಪೇಲಿ, ಸಂಗಣ್ಣ ಹಂಡಿ, ಕಾಶಿನಾಥ ಹುಡೇದ, ಸಹಕಾರಿ ಧುರೀಣರಾದ ಎಸ್. ಎಸ್ ಚಳ್ಳಗಿಡದ, ಉಮೇಶ ಮೇಟಿ, ಸಿದ್ದು ಭದ್ರಶೆಟ್ಟಿ, ಮುತ್ತಣ್ಣ ಕಲಗೋಡಿ,ವಿಷ್ಣು ಗೌಡರ, ಕುಶಪ್ಪ ಕಾಳಗಿ, ಸಾಂತಪ್ಪ ಶಾಂತಗೇರಿ, ಸಹಕಾರಿ ಇಲಾಖೆಯ ಎಸ್ .ಎನ್ ನೀಲಪ್ಪನವರ, ಮಹಾದೇವ ಕುಂಬಾರ, ಶ್ರೀಶೈಲ ಬಾಡಗಿ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.