ADVERTISEMENT

ಮಹಾತ್ಮರ ಜೀವನ ಚರಿತ್ರೆ ತಿಳಿದುಕೊಳ್ಳಿ: ಹನಮಂತ ನಿರಾಣಿ

ನವರಾತ್ರಿ ಉತ್ಸವ: ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:15 IST
Last Updated 3 ಅಕ್ಟೋಬರ್ 2025, 4:15 IST
<div class="paragraphs"><p><strong>ಬೀಳಗಿ ತಾಲ್ಲೂಕಿನ ನಾಗರಾಳ ಕಪ್ಪರ ಪಡಿಯಮ್ಮದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿದರು.</strong></p></div>

ಬೀಳಗಿ ತಾಲ್ಲೂಕಿನ ನಾಗರಾಳ ಕಪ್ಪರ ಪಡಿಯಮ್ಮದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿದರು.

   

ಬೀಳಗಿ: ‘ಕನ್ನಡ ನಾಡು ಸಂಸ್ಕಾರಯುತವಾಗಿ ಬೆಳೆಯಲು ಮಠಗಳು ಜನಮನದಲ್ಲಿ ಬಿತ್ತಿದ ಆಧ್ಯಾತ್ಮಿಕ ಮೌಲ್ಯಗಳೇ ಕಾರಣ. ಜಾತಿ, ಮತ, ಪಂಥ ನೋಡದೆ ಇಡೀ ಮನುಕುಲವನ್ನು ಏಕಮುಖವಾಗಿ ನೋಡಿ ಉದ್ಧರಿಸುವ ಕೆಲಸ ಮಠಗಳು ಮಾಡಿವೆ. ಅವುಗಳ ಪ್ರೇರಣೆಯಿಂದಲೇ ನಾವು ವಿವಿಧ ಕ್ಷೇತ್ರಗಳಲ್ಲಿ ಬೆಳೆಯಲು ಸಾಧ್ಯವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.

ತಾಲ್ಲೂಕಿನ ನಾಗರಾಳ ಕಪ್ಪರ ಪಡಿಯಮ್ಮದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಪುರಾಣ, ಪ್ರವಚನ ಕೇಳುವುದರಿಂದ ಒಳ್ಳೆಯ ವಿಚಾರಗಳು ಸಂತ, ಶರಣರ ಮಹಾತ್ಮರ ಜೀವನ ಚರಿತ್ರೆಯನ್ನು ಕೇಳುವುದರಿಂದ ಮನುಷ್ಯ ಸದಾ ಸನ್ಮಾರ್ಗದಲ್ಲಿರಲು ನೆರವಾಗುತ್ತದೆ’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಮಾತನಾಡಿ, ಜನ್ಮತಾಳಿದ ಮೇಲೆ ನಮ್ಮನ್ನು ರಕ್ಷಣೆ ಮಾಡುವುದು ನಮ್ಮ ಹಣ, ಸಂಪತ್ತು, ಜಾತಿ, ಸಮಾಜವಲ್ಲ. ಬದಲಿಗೆ ನಮ್ಮನ್ನು ರಕ್ಷಣೆ ಮಾಡುವುದು, ಮೋಕ್ಷದೆಡೆಗೆ ಕರೆದುಕೊಂಡು ಹೋಗುವುದು ಭಗವಂತನ ನಾಮಸ್ಮರಣೆಯಾಗಿದೆ. ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತವೆ’ ಎಂದರು.

ನಾಗರಾಳ ದಿಗಂಬರೇಶ್ವರ ಮಠದ ಪೀಠಾಧಿಪತಿ ಶೇಷಪ್ಪಯ್ಯ ಸ್ವಾಮೀಜಿ ಹಾಗೂ ನಿಯೋಜಿತ ಶ್ರೀಗಳಾದ ನಿಂಗಪ್ಪಯ್ಯ ಸ್ವಾಮೀಜಿ, ವಿ.ಜಿ. ರೇವಡಿಗಾರ ,ಮಲ್ಲಪ್ಪ ಶಂಭೂಜಿ, ಬಸವರಾಜ ಉಮಚಗಿಮಠ, ರಾಮಣ್ಣ ಕಾಳಪ್ಪಗೋಳ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ವಿಠ್ಠಲ ಗಡ್ಡದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗವ್ವ ಹೊಸಮನಿ, ಗಂಗಾಧರ ಬಿಂಗಿ, ಶಿವಪ್ಪ ಹವೇಲಿ ಇದ್ದರು. ಅವಿನಾಶ ಜತ್ತಿ ನಿರೂಪಿಸಿದರು. ಶ್ರೀವರ ಗೊಳಸಂಗಿ ಸ್ವಾಗತಿಸಿದರು. ಮುರುಗೇಶ ವಾಲಿ ವಂದಿಸಿದರು.

ಸಂಭ್ರಮದ ದಸರಾ ಉತ್ಸವ

ರಬಕವಿ ಬನಹಟ್ಟಿ: ನಗರದಲ್ಲಿ ಗುರುವಾರ ಸಂಭ್ರಮದಿಂದ ದಸರಾ ಹಬ್ಬದ ಕಾರ್ಯಕ್ರಮಗಳು ನಡೆದವು.

ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಪೂಜಾ ಸಾಮಾಗ್ರಿಗಳ ಮತ್ತು ಬನ್ನಿ ಮರದ ಎಲೆಗಳ ಮಾರಾಟ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ಮುಟ್ಟಿತು. ಜನರು ಬಾಳೆ ಹಣ್ಣು, ಟೆಂಗಿನಕಾಯಿ, ಕಬ್ಬು ಬಾಳೆ ಗಿಡಗಳನ್ನು ಹೂ, ಹೂ ಮಾಲೆಗಳನ್ನು ಖರೀದಿಸಲು ಮುಂದಾಗಿದ್ದರು. ಮಾರುಕಟ್ಟೆಯಲ್ಲಿ ಟೆಂಗಿನಕಾಯಿ ಬೆಲೆ ₹40ಕ್ಕೆ ಮಾರಾಟಗೊಂಡವು. ಮಾರುಕಟ್ಟೆಯಲ್ಲಿ ಚಂಡು ಹೂ ಕೆ.ಜಿ ಗೆ ₹120 ರಂತೆ, ಸೇವಂತಿ ಹೂ ₹160ಕ್ಕೂ ಹೆಚ್ಚು ಬೆಲೆಗೆ ಮಾರಾಟಗೊಂಡಿತು.

ಎಲ್ಲೆಡೆ ದೇವಿ ಪೂಜೆ: ನಗರದ ಬಹುತೇಕ ಸ್ಥಳಗಳಲ್ಲಿ ದೇವಿಯ ಪೂಜೆ ಸಂಭ್ರಮದಿಂದ ನಡೆಯಿತು. ಉಡಿ ತುಂಬುವ ಕಾರ್ಯಕ್ರಮಗಳು ನಡೆದವು.

ಸಂಚಾರಕ್ಕೆ ತೊಂದರೆ: ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಮೇಲೆ ಮಂಗಳವಾರ ಪೇಟೆಯ ಸಂತೆ ನಡೆಯುತ್ತಿರುವುದರಿಂದ ಬೆಳಗ್ಗೆ ಸಂಚಾರಕ್ಕೆ ಬಹಳಷ್ಟು ತೊಂದರೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.