ADVERTISEMENT

ಇಳಕಲ್: ‘ಮಸೀದಿ ನಿರ್ಮಾಣಕ್ಕೆ ₹5ಲಕ್ಷ ದೇಣಿಗೆ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:31 IST
Last Updated 7 ಜೂನ್ 2025, 14:31 IST
ಇಳಕಲ್ ಈದ್ಗಾ ಮೈದಾನದಲ್ಲಿ ನಿರ್ಮಿಸಲಾದ ಈದ್ಗಾ ಮಸೀದಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು
ಇಳಕಲ್ ಈದ್ಗಾ ಮೈದಾನದಲ್ಲಿ ನಿರ್ಮಿಸಲಾದ ಈದ್ಗಾ ಮಸೀದಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು   

ಇಳಕಲ್: ನಗರದ ಈದ್ಗಾ ಮೈದಾನದಲ್ಲಿ ನಿರ್ಮಿಸಲಾದ ಮಸೀದಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಈದ್ಗಾ ಅಭಿವೃದ್ಧಿಗೆ ಅನುದಾನ ನೀಡುವೆ. ಮಸೀದಿ ನಿರ್ಮಾಣಕ್ಕೆ ₹5 ಲಕ್ಷ ದೇಣಿಗೆ ನೀಡಲಾಗುವುದು.
ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಸಮಾಜದಲ್ಲಿ ಸಹೋದರತೆ ಹಾಗೂ ಸಹಬಾಳ್ವೆಯ ಮಹತ್ವ ತಿಳಿಸುತ್ತದೆ. ತ್ಯಾಗ, ಅರ್ಪಣೆ ಹಾಗೂ ಬಲಿದಾನದಿಂದ ದೇವನನ್ನು ಒಲಿಸಿಕೊಳ್ಳಲು ಸಾಧ್ಯ ಎನ್ನುವ ಸಂದೇಶ ನೀಡುತ್ತದೆ’ ಎಂದರು.

ಇದಕ್ಕೂ ಮುನ್ನ ಬಕ್ರೀದ್‌ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ್, ಭಾವುದ್ಧಿನ್ ಖಾಜಿ, ಮೊಹಿನುದ್ಧಿನ್ ಬಾಷಾ ಹುಣಸಗಿ ಸೇರಿದಂತೆ ನೂರಾರು ಮುಸ್ಲಿಮರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.